ಲೇಖಕಿ ಬಿ.ಎಸ್. ಪಾರಿಜಾತ ಮೋಹನ್ ಅವರು ಬರೆದ ಕೃತಿ-ನಾಡ ಗುಡಿಗಳು. ಸ್ಥಳ-ಕಾಲವನ್ನು ಪ್ರತಿನಿಧಿಸುವ ನಾಡಗುಡಿಗಳು ಮನುಷ್ಯನ ನಡಾವಳಿಕೆಯನ್ನು ತಮ್ಮದೇ ರೀತಿಯಲ್ಲಿ ನಿಯಂತ್ರಿಸುವ ಮೂಲಕ ಇಡೀ ಊರ ನೆಮ್ಮದಿ-ಆರೋಗ್ಯವನ್ನು ಕಾಯ್ದುಕೊಂಡು ಬರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅಂಶವೇ ಕೃತಿಯ ಜೀವಾಳ. ದೇವಸ್ಥಾನಗಳು ಎಂದರೆ ಪೂಜೆ=ಅರ್ಚನೆ ಮಾತ್ರ ವಿಶೇಷವಲ್ಲ; ಭಕ್ತನ ಆತ್ಮದಲ್ಲಿ ಪರಮಾತ್ಮನ ಇರುವಿಕೆಯನ್ನು ತೋರುವ ಸ್ಥಳಗಳು. ಪುರಾಣ ವಿಶೇಷತೆಗಳ ವಿವರಣೆಗೆ ಇರುವ ಸ್ಥಾವರ ರೂಪಗಳು. ಅಲೌಕಿಕ ಶಕ್ತಿಯನ್ನು ಮನದಟ್ಟು ಮಾಡಿಸಿ ಎಚ್ಚರಿಸುವ ತಾಣಗಳು.
ಕರ್ನಾಟಕದ ವಿಶೇಷ ಧಾರ್ಮಿಕ-ಪೌರಾಣಿಕ-ಐತಿಹಾಸಿಕ ತಾಣಗಳ ಕುರಿತು ಯಾತ್ರಿಕರಿಗೆ ಮಾಹಿತಿ ನೀಡುವ ಕೃತಿ ಇದು. ಚರಿತ್ರೆಯ ಕಾಲಗತಿಯಲ್ಲಿ ದೇಗುಲಗಳು ಕಂಡ ಏಳು-ಬೀಳುಗಳ ವಿವರಣೆಯೂ ಇದೆ. ನಾಡಗುಡಿಗಳು ಮಾತೃದೇವತೆಗಳನ್ನು ಪ್ರತಿನಿಧಿಸುತ್ತವೆ. ಪ್ರವಾಸದ ಸಿದ್ಧತೆ, ದೇಗುಲಗಳ ದಿನದ ದರ್ಶನ, ವೇಳಾಪಟ್ಟಿ, ಕ್ಷೇತ್ರದ ಮಾರ್ಗ, ಊಟ-ವಸತಿ ಸೌಲಭ್ಯ ಹೀಗೆ ಯಾತ್ರಿಕರಿಗೆ ಉಪಯುಕ್ತವಾದ ಸಾಧ್ಯವಿದ್ದ ಎಲ್ಲ ಮಾಹಿತಿ ಒಳಗೊಂಡಿದೆ. ಕರ್ನಾಟಕದಾದ್ಯಂತ ಪ್ರವಾಸ ಕೈಕೊಂಡ ಲೇಖಕಿ ಬಿ.ಎಸ್. ಪಾರಿಜಾತ ಮೋಹನ್ ಅವರು ವಿವಿಧ ಕ್ಷೇತ್ರದ ಮಾಹಿತಿಯನ್ನು ಚಂದವಾಗಿ ಪೋಣಿಸಿದ ಲೇಖನ ಮಾಲೆಯೇ ಈ ಕೃತಿ.
©2024 Book Brahma Private Limited.