`ಮನೋಮಿ’ ಕಮಲಾದಾಸ್ ಅವರು ಕೃತಿಯಾಗಿದೆ. ಈ ಕೃತಿಯನ್ನು ಸಾರಾ ಅಬೂಬಕ್ಕರ್ ಅವರ ಅನುವಾದಿತ ಸಂಕಲನವಾಗಿದೆ. ಇದು ಕಾದಂಬರಿಯ ಹೆಸರೂ ಹೌದು, ಕಾದಂಬರಿಯೊಳಗಿನ ಪ್ರಧಾನ ಪಾತ್ರದ ಹೆಸರೂ ಹೌದು. ಬೌದ್ದರ ಸವಿತ ಯಾತ್ರಾಸ್ಥಳಗಳಾದ ಸಾರಾನಾಥ ಮತ್ತು ಬುದ್ಧಗಯಾ ನೋಡಲು, ಶ್ರೀಲಂಕಾದಿಂದ ಭಾರತಕ್ಕೆ ಬಂದ ಸಿಂಹಳೀಯನ ಕುಟುಂಬದ ವಿವರಗಳನ್ನು ನೀಡುವುದರೊಂದಿಗೆ ಆರಂಭ ಗೋಳ್ಳುವ ಕಾದಂಬರಿಯು ಶ್ರೀ ದೇಶದಲ್ಲಿನ ಜಾಗೀಯ ಪರ್ಷಣೆಗಳನ್ನು ಹಂತಹಂತವಾಗಿ ಬಿಚ್ಚಿಡುತ್ತದೆ. ಲ್ಲಾ ಕಾಲ ಗಳ, ಎಲ್ಲಾ ಸಮಾಜಗಳಲ್ಲೂ ಧರ್ಮ, ದೇಶ, ಭಾಷೆಗಳ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಗೆ ಹೇಗೆ ಜನಸಾಮಾನ್ಯರು ಬಲಿಪಶುಗಳಾಗುತ್ತಾರೆ ಎಂಬುದಕ್ಕೆ ಈ ಕೃತಿ ಒಂದು ಕೈಗನ್ನಡಿ.
ಮನೋಮಿ ಮತ್ತು ಬಲಿ ಸಾರಾ ಅಬೂಬಕ್ಕರ್ ಅವರು ಅನುವಾದಿಸಿರುವ ಎರಡು ಜೋಡಿ ಕಾದಂಬರಿಗಳ ಗುಚ್ಛ. ಇವುಗಳಲ್ಲಿ ಮೊದಲನೆಯದು 'ಮನೋಮಿ', ಇದು ಇಂಗ್ಲಿಷ್ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಾಹಿತ್ಯರಚನೆ ಮಾಡಿರುವ ಕಮಲಾದಾಸ್ ಅವರ ಅನುವಾದಿತ ಕೃತಿ. ಇದರ ಶೀರ್ಷಿಕೆಯೇ ಸಿದ್ಧವೆನಿಸುತ್ತದೆ. ಇದು ಕಾದಂಬರಿಯ ಹೆಸರೂ ಹೌದು, ಕಾದಂಬರಿಯೊಳಗಿನ ಪ್ರಧಾನ ಪಾತ್ರದ ಹೆಸರೂ ಹೌದು. ಬೌದ್ದರ ಸವಿತ ಯಾತ್ರಾಸ್ಥಳಗಳಾದ ಸಾರಾನಾಥ ಮತ್ತು ಬುದ್ಧಗಯಾ ನೋಡಲು, ಶ್ರೀಲಂಕಾದಿಂದ ಭಾರತಕ್ಕೆ ಬಂದ ಸಿಂಹಳೀಯನ ಕುಟುಂಬದ ವಿವರಗಳನ್ನು ನೀಡುವುದರೊಂದಿಗೆ ಆರಂಭಗೊಳ್ಳುವ ಕಾದಂಬರಿಯು ದೇಶದಲ್ಲಿನ ಜನಾಂಗೀಯ ಘರ್ಷಣೆಗಳನ್ನು ಹಂತಹಂತವಾಗಿ ಬಿಚ್ಚಿಡುತ್ತದೆ. ಒಂದು ಕಾಲಕ್ಕೆ ತಮಿಳರು ಮತ್ತು ಸಿಂಹಳೀಯರು ಸಾಮರಸ್ಯದಿಂದ ಬದುಕುತ್ತಿದ್ದರು. ಮುಂದೆ 1980ರ ದಶಕದಿಂದ ಈಚೆಗೆ ಕೆಲವೇ ಕೆಲವು ಕಾಣದ ಕೈಗಳ ಕೈವಾಡದಿಂದ ಈ ಸಾಮರಸ್ಯ ಹೇಗೆ ಕದಡುತ್ತಾ ಹೋಯಿತು ಎಂಬುದನ್ನು ಈ ಕಾದಂಬರಿ ದಾಖಲಿಸುತ್ತದೆ (ಇಲ್ಲಿ ಬಾಂಗ್ಲಾ ಲೇಖಕಿ ತಸ್ಲಿಮಾ ನಸೀನರ "ಉಜ್ಜಾ' ಕಾದ೦ಬರಿಯ ನೆನಪು ಮೂಡುತ್ತದೆ), ಎಲ್ಲಾ ಕಾಲಗಳ, ಎಲ್ಲಾ ಸಮಾಜಗಳಲ್ಲೂ ಧರ್ಮ, ದೇಶ, ಭಾಷೆಗಳ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಗೆ ಹೇಗೆ ಜನಸಾಮಾನ್ಯರು ಬಲಿಪಶುಗಳಾಗುತ್ತಾರೆ ಎಂಬುದಕ್ಕೆ ಈ ಕೃತಿ ಒಂದು ಕೈಗನ್ನಡಿ. 'ಬಳೆ' ಇದಯ ಮುತ್ತ ಜನಾಂಗದ ಮಹಿಳೆಯರ ಬದುಕನ್ನು ಚಿತ್ರಿಸಿರುವ ಮಲೆಯಾಳಂ ಲೇಖಕಿ ಬಿ. ಎಮ್. ಸುವರಾರವರ ಕೃತಿ, ಅನುವಾದಕರಾದ 'ಸಾರಾ ಆದರೇ ಮುಸ್ಲಿಂ ಸಮಾಜದ ಚಿತ್ರಣವನ್ನು ತಮ್ಮ 'ಚಂದ್ರಗಿರಿಯ ತೀರದಲ್ಲಿ ' ಎಂಬ ಕಾದಂಬರಿಯಲ್ಲಿ ನೀಡಿದ್ದಾದರೂ ಇದಂಬರಿಯಲ್ಲಿ ನಾವು ಕೇರಳದ ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜದ ನೋವು-ನಲಿವುಗಳ ಚಿತ್ರಣವನ್ನು ಕಾಣಬಹುದು. ಇಡೀ ಪುರುಷ ಪ್ರಧಾನ ಸಮಾಜವೇ ಮಹಿಳೆಯ ಪಾಲಿಗೆ ಹೇಗೆ ಬಲಿಯಾಗಿ ಪರಿಣಮಿಸಿ, ಬಂಧಿಸಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂಬುದನ್ನು ಮೂಲಲೇಖಕಿ ನಿರೂಪಿಸಿದ್ದಾರೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಸಾರಾ ಅಬೂಬಕ್ಕರ್ ಅವರು ಅನುವಾದಿಸಿದ್ದಾರೆ. ಎರಡೂ ಕಾದಂಬರಿಗಳು ಕನ್ನಡ ಅನುವಾದಕ್ಷೇತ್ರಕ್ಕೆ ಅಪರೂಪದ ಕೊಡುಗೆಗಳು.
©2024 Book Brahma Private Limited.