ವಚನ ಚಳವಳಿಯ ಪ್ರಮುಖರಾದ ಬಸವಣ್ಣನವರ ಕುರಿತು ತೆಲುಗಿನ ಸಾಹಿತ್ಯದಲ್ಲಿ ಏನಿದೆ? ಬಸವಣ್ಣವನು ತೆಲುಗು ಸಾಹಿತ್ಯದಲ್ಲಿ ನೋಡಿದ್ದೇಗೆ? ಇವೆಲ್ಲದ್ದಕ್ಕೂ ಜಾಜಿ ದೇವೇಂದ್ರಪ್ಪ ಅವರ ತೆಲುಗು ಸಾಹಿತ್ಯದಲ್ಲಿ ಬಸವಣ್ಣ ಅನುವಾದಿತ ಕೃತಿಯು ವಿವರಣೆ ಸಿಗುತ್ತದೆ. ವಾಸ್ತವ ಬದುಕಿನ ಅಭಿವ್ಯಕ್ತಿಯ ವಚನಗಳು ವೈಚಾರಿಕ ಜಗತ್ತನ್ನು ರೂಪಿಸುವ ವೇದಿಕೆಯನ್ನು ನಿರ್ಮಿಸಿವೆ. ವರ್ಗ-ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಹೊರಟ ವಚಳ ಚಳವಳಿಯ ಅರಿವನ್ನು ನಾವಿಲ್ಲಿ ತಿಳಿಯಬಹುದು. ರಾಜಕಾರಣ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಜನತಂತ್ರದ ಭಾಗವಾಗಿ ನೋಡಿದ ಕನ್ನಡದ ರಾಜಕೀಯ ಶಾಸ್ತ್ರಜ್ಞ ಬಸವಣ್ಣ. ಇವರ ಬಗ್ಗೆ ಭಾರತದ ಕವಿಗಳು ಅವರವರ ಭಾಷೆಯಲ್ಲಿ ಕೊಂಡಾಡಿ ಕಾವ್ಯ ರಚನೆ ಮಾಡಿದ್ದಾರೆ. ಆಂಧ್ರದಲ್ಲಿಯೂ ಇವರ ಬಗ್ಗೆ ಆಂಧ್ರದ ಕವಿ ಬರೆದಿರುವ ಕೃತಿಯನ್ನು ಕನ್ನಡದ ಓದುಗರ ಮುಂದಿಟ್ಟಿದ್ದಾರೆ ಜಾಜಿ ದೇವೇಂದ್ರಪ್ಪ ಅವರು.
©2024 Book Brahma Private Limited.