ನೊಬೆಲ್ ಪ್ರಶಸ್ತಿ ವಿಜೇತರ ಕತೆಗಳ ಕನ್ನಡಾನುವಾದ ‘ಹುಣ್ಣಿಮೆ ಚಂದಿರ’. ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹುಣ್ಣಿಮೆ ಚಂದಿರ ಈ ಕೃತಿಯು ಭಾರತೀಯ ಲೇಖಕನೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶದ ನೊಬೆಲ್ ಪ್ರಶಸ್ತಿ ವಿಜೇತರ ಪ್ರಸಿದ್ಧ ಕತೆಗಳ ಸಂಕಲನ. ಇಡೀ ಜಗತ್ತಿನಲ್ಲಿಯೇ ಸಾಹಿತ್ಯಕ್ಕೆ ಕೊಡಮಾಡುವ ಅತಿ ಹೆಚ್ಚು ಮೌಲ್ಯವುಳ್ಳ ಪ್ರಶಸ್ತಿಯೆಂದರೆ ಅದು ನೊಬೆಲ್ ಪ್ರಶಸ್ತಿ. ನೊಬೆಲ್ ಪ್ರಶಸ್ತಿ ಎಂಬ ನಾಮಮುದ್ರೆಯೆ ಆ ಲೇಖಕನ ಕೃತಿಗಳನ್ನು ಕುತೂಹಲದಿಂದ ಓದುವ ವರ್ಗವನ್ನು ಸೃಷ್ಟಿಸುತ್ತದೆ. ಅಲ್ಲದೆ ಈ ಪ್ರಶಸ್ತಿಗಳಿಂದ ಅವರ ಕೃತಿಗಳು ಬೆರಗುಗಣ್ಣಿನಿಂದ ನೋಡುವ ಅಮೂಲ್ಯ ರತ್ನಗಳಾಗುತ್ತವೆ. ಮೌಲಿಕವಾದ ಜೀವನಾನುಭವ ಮತ್ತು ಆದರ್ಶಗಳಿಗೆ ಅಕ್ಷರ ರೂಪವನ್ನು ಕೊಟ್ಟು ಸಾರ್ಥಕ ಬದುಕಿನೆಡೆಗೆ ಮನುಷ್ಯರನ್ನು ಸೆಳೆಯುವುದು ಈ ಲೇಖಕರ ಪ್ರಮುಖ ಆಶಯ. ಯಾವುದೇ ಕತೆಯಾಗಲಿ ಅಥವಾ ಕೃತಿಯಾಗಲಿ ಅದು ತನ್ನೊಳಗಿನ ಮೌಲಿಕಾಶಯದಿಂದ ಮತ್ತು ನಿರೂಪಣಾ ವಿಧಾನದಿಂದಲೇ ಪ್ರಾಮುಖ್ಯತೆ ಪಡೆಯುತ್ತದೆ. ಅಂತಹ ಮೌಲಿಕಾಶಯ ಮತ್ತು ನಿರೂಪಣೆಯನ್ನು ಹೊಂದಿರುವ ಈ ಕತೆಗಳು ಎಂದೆಂದಿಗೂ ಅಮೂಲ್ಯ ರತ್ನಗಳೆ.
©2024 Book Brahma Private Limited.