ಲೇಖಕಿ ಪಾರ್ವತಿ ಜಿ. ಐತಾಳ್ ಅವರ ಅನುವಾದಿತ ಕೃತಿ ʻಇನ್ನೊಂದು ತುಂಬುಗಣ್ಣ ನಗುʼ. ಮಲೆಯಾಳಂನ ಕಾದಂಬರಿಕಾರರೂ ಭೌತವಿಜ್ಞಾನಿಗಳೂ ಆದ ಡಾ. ಸಿ. ರಾಧಾಕೃಷ್ಣನ್ ಅವರ 'ಇನಿಯೊರು ನಿರಕಣ್ ಚಿರಿ' ಎನ್ನುವ ಕಾದಂಬರಿಯನ್ನು ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರೆ. ಈ ಕಾದಂಬರಿಯು ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವ್ಯತಿರಿಕ್ತ ಸನ್ನಿವೇಶಗಳಾದ ಸಾಮಾಜಿಕ- ರಾಜಕೀಯ ಕಲಹಗಳು, ರಾಜಕೀಯ ಹತ್ಯೆಗಳು ಎಂಬೀ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರ ಮಧ್ಯೆ ಸುಳ್ಳು ಗುರುತಿನಲ್ಲಿ ಬದುಕುವ ಇಬ್ಬರು ಅಸಾಧಾರಣ ಪ್ರೇಮಿಗಳ ಕತೆಯನ್ನು ಇಲ್ಲಿ ಚಿತ್ರಿಸಲಾಗಿದೆ. ದುಃಖ- ಸಂತೋಷ, ಭೌತಿಕವಾದ ಮತ್ತು ಆಧ್ಯಾತ್ಮಿಕತೆ ಮತ್ತು ಯುದ್ಧ ಮತ್ತು ಶಾಂತಿ ಜಗತ್ತಿನಲ್ಲಿ ಹೇಗೆ ಸಹಬಾಳ್ವೆ ನಡೆಸುತ್ತವೆ ಎಂಬುದರ ಬಗ್ಗೆಯೂ ರಾಧಾಕೃಷ್ಣನ್ ಅವರು ಹೇಳುತ್ತಾರೆ.
©2024 Book Brahma Private Limited.