‘ನೀರು’ ಬೆ.ಗೋ. ರಮೇಶ್ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ; ಈಚಿನ ವರ್ಷಗಳಲ್ಲಿ, ನಗರಗಳಲ್ಲಿನ ಜನ ಸಂಖ್ಯೆ ವಿಫುಲವಾಗಿ ಬೆಳೆದಿದ್ದು ಸ್ಥಳೀಯ ಹಾಗೂ ಹತ್ತಿರದ ಜಲಮೂಲಗಳು ಸಾಕಾಗದೆ ಹೋಗಿವೆ. ಇದರಿಂದಾಗಿ, ಗಮನಾರ್ಹವಾಗಿ ಖರ್ಚಾದರೂ ದೂರದ ಪ್ರದೇಶಗಳಿಂದ ನೀರು ತರಿಸಿಕೊಳ್ಳಬೇಕಾದುದು ಅವಶ್ಯವಾಗಿದೆ. ನಗರಗಳಲ್ಲಿನ ಮತ್ತೊಂದು ಸಮಸ್ಯೆ ಎಂದರೆ ಹೊಲಸನ್ನು ಸಾಗಿಸುವ ವ್ಯವಸ್ಥೆ, ಸಣ್ಣ ಪಟ್ಟಣಗಳಾದರೆ, ಅಲ್ಲಿಯ ಜನ ಪಟ್ಟಣದ ಹೊರವಲಯದಲ್ಲಿ ತರಕಾರಿಗಳನ್ನು ಬೆಳೆಯುವ ರೈತರಿಗೆ ಅದನ್ನು ಮಾರಿಬಿಡುತ್ತಾರೆ. ಇದು ಅನಾರೋಗ್ಯಕರ. ದೊಡ್ಡ ಪಟ್ಟಣಗಳಲ್ಲಿ ಹೊಲಸನ್ನು ಸಾಮಾನ್ಯ ವಾಗಿ ನದಿಗೋ, ನಾಲೆ ಅಥವಾ ಸಮುದ್ರಕ್ಕೂ ಹಾಕುವ ಮೊದಲು ರೋಗಕಾರಕ ಕ್ರಿಮಿಗಳನ್ನು ತೆಗೆಯಲು ಯತ್ನಿಸುತ್ತೇವೆ. ಇದು ಸಮರ್ಪಕವಾಗಿ ಆಗದ ಕಾರಣ, ನದಿಗಳು ಹೆಚ್ಚು ಕಲುಪಿತವಾಗುತ್ತಿರುವುದು ಕಂಡುಬರುತ್ತಿದೆ.
©2024 Book Brahma Private Limited.