ಮಧ್ಯಯುಗೀನ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಬಹುಮುಖ್ಯವಾಗಿದೆ. ದಕ್ಷಿಣ ಭಾರತದ ಬಹುಪಾಲು ಪ್ರದೇಶವನ್ನು ಅವರು ವಿಜಾಪುರ ಕೇಂದ್ರದಿಂದ ಆಳಿದರು. ಇಂದಿನ ಅಖಂಡ ಕರ್ನಾಟಕವನ್ನು ಅವರು ಸುಮಾರು ಒಂದು ಶತಮಾನದಷ್ಟು ಕಾಲ ತಮ್ಮ ಅಂಕಿತದಲ್ಲಿ ಇಟ್ಟುಕೊಂಡಿದ್ದರು. ಆದುದರಿಂದಲೇ ಕರ್ನಾಟಕದ ಚರಿತ್ರೆ ಆದಿಲಶಾಹಿ ಚರಿತ್ರೆಯನ್ನು ಅಭ್ಯಸಿಸದೇ ಪೂರ್ತಿಯಾಗಲು ಸಾಧ್ಯವಿಲ್ಲ. ನಾಡಿನ ವಿಶ್ವವಿದ್ಯಾನಿಲಯಗಳು, ಭಾರತೀಯ ಇತಿಹಾಸ ಅನುಸಂಧಾನ ಇತ್ಯಾದಿ ಸಂಸ್ಥೆಗಳು ಇತಿಹಾಸದ ಕೆಲಸ ಮಾಡುತ್ತಿದ್ದರೂ ಬಿಜಾಪುರ ಇತಿಹಾಸದ ವಿಷಯದಲ್ಲಿ ಗಂಭೀರ ಅಧ್ಯಯನ ಮಾಡಿರುವುದು ಕಡಿಮೆ. ಅದರ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳನ್ನು ಅವಲಂಬಿಸಬೇಕಾಗಿರುವುದರಿಂದಲೋ ಏನೋ ವಿವಿಗಳು ಈ ಬಗ್ಗೆ ನಿರ್ಲಕ್ಷವನ್ನು ತಾಳಿವೆ. ಈ ನಿಟ್ಟಿನಲ್ಲಿ ಬಿಎಲ್‌ಡಿಇ ಸಂಸ್ಥೆ ವಿಜಯಪುರ ಇದರ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ತರುವ ಮೂಲಕ, ಕರ್ನಾಟಕದ ಸುವರ್ಣಕಾಲವೊಂದರ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಒಂಬತ್ತನೆ ಸಂಪುಟವೇ 'ಹಜ್ರತ್ ಸ್ವಾಜಿ ಮಹಮೂದ ಬಹರಿ ರಚಿಸಿದ ಊರುಸೇ ಇರ್ಫಾನ್(ಮನ್‌ಲಗನ್) ಕೃತಿ. ಅಧ್ಯಾತ್ಮದ ಉದ್ದೇಶದಿಂದ ರಚಿತವಾದ ಕೃತಿ ರಚಿತವಾಗಿದ್ದರೂ, ಲೌಕಿಕವಾದ ಮನುಷ್ಯನ ಪ್ರೇಮ, ವೈರಾಗ್ಯ, ಮಿತಿಗಳನ್ನೂ ಚರ್ಚಿಸುತ್ತದೆ.
©2024 Book Brahma Private Limited.