‘ನೋಅಂ ಚೋಂಸ್ಕಿ’ ಬಿ.ಬಿ. ರಾಜಪುರೋಹಿತ ಅವರ ಲೇಖನ ಬರಹ ಸಂಕಲನವಾಗಿದೆ. ನೋಅಂ ಚೋಂಸ್ಕಿ ಅವರ ಕುರಿತು ಬರೆದಿರುವ ಈ ಕೃತಿ ವಿಶಿಷ್ಟವಾದದ್ದು. ಚೋಂ ಅವರ ಜೀವನದ ಹಲವು ಮುಖಗಳು ಮತ್ತು ವಿರಾಟ್ ರೂಪದ ಬರವಣಿಗೆಯನ್ನು ಈ ಕೃತಿ ಸಂಕ್ಷಿಪ್ತವಾಗಿ ಪರಿಚಯಿಸಿದೆ. ಜಗತ್ತಿನ ಮಹತ್ವದ ಭಾಷಾವಿಜ್ಞಾನಿ, ಚಿಂತಕ ನೋಅಂ ಚೋಂಸಿ ಬರಹದೆಡೆಗೆ ಆಸಕ್ತರ ಗಮನಸೆಳೆಯುವ ಕೆಲಸ ಮಾಡಿದೆ. ಈ ಮೂಲಕ ಚೋಂ ಅವರ ಮುಖ್ಯ ಕಾಳಜಿಗಳು, ಚಿಂತನಾ ಕ್ರಮಗಳು, ಸಿದ್ಧಾಂತಗಳ ಗ್ರಹಿಕೆಗೆ ಒಂದು ಕಿರುದಾರಿ ಲಭ್ಯವಾಗುವುದು. ವಿಶೇಷವಾಗಿ ಕನ್ನಡದ ಯುವ ಸಂಶೋಧಕರು ಇಂಥ ಪುಸ್ತಕಗಳಿಂದ ತಮ್ಮ ಆಸಕ್ತಿಗಳನ್ನು ವಿಸ್ತಾರಗೊಳಿಸಿಕೊಳ್ಳಲು ಅನುಕೂಲವಾಗುವುದು.
©2024 Book Brahma Private Limited.