‘ಬಾಲ್ಯದ ನೆನಪುಗಳು’ ಕಮಲಾ ಸುರಯ್ಯಾ ಅವರ ಮೂಲ ಕೃತಿಯಾಗಿದ್ದು, ನಾ. ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನಮ ಕೆಲವೊಂದು ವಿಚಾರಗಳು ಹೀಗಿವೆ; ಅರಮನೆಯ ಮಹಾದ್ವಾರದಲ್ಲಿ ಎರಡು ಶಿಲಾವಿಗ್ರಹಗಳನ್ನು ಕಂಡ ನೆನಪು, ಅವರು ದ್ವಾರಪಾಲಕರೆಂಬುದಾಗಿ ಅಜ್ಜಿ ನನಗೆ ತಿಳಿಸಿದ್ದರು. ಕಲ್ಕತ್ತಾದ ಪಾರ್ಕ್‌ಟ್‌ನಲ್ಲಿ ನನ್ನ ಅಪ್ಪ ಅಮ್ಮಂದಿರು ವಾಸಿಸುತ್ತಿದ್ದ ಮನೆಯ ಗೇಟಿನ ಬಳಿ ಕಾಣುತ್ತಿದ್ದ ಕಾವಲುಗಾರನನ್ನು ನಾನು ಪ್ರೀತಿಪೂರ್ವಕ ನೆನಪಿಸಿಕೊಂಡೆ. ಜೀವಂತ ದ್ವಾರಪಾಲಕ, ಹಗ್ಗದ ಖೋಲಿಯಲ್ಲಿ ನನ್ನನ್ನು ತನ್ನೊಂದಿಗೆ ಕುಳ್ಳಿರಿಸಿಕೊಂಡು ನನ್ನ ಟೀಚರ ಬಗ್ಗೆಯೂ ದಾದಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತಿದ್ದ ಪ್ರಿಯ ಸ್ನೇಹಿತ. ಅರಮನೆಯ ಮೊಗಸಾಲೆಯ ದಿಣ್ಣಿಗೆ ಆತು ಮಲಗಿಯೂ ನಲದಲ್ಲಿ ಅತ್ತಿತ್ತ ಅಲೆದಾಡುತ್ತಲೂ ಇದ್ದ ಅನೇಕ ಅರೆನಗ್ನ ಪುರುಷರು ನನ್ನ ಕಣ್ಣೆದುರು ಪ್ರತ್ಯಕ್ಷರಾದರು. ಅಂಗಿ ಧರಿಸದ ಅವರೆಲ್ಲ ಹಣೆಯಲ್ಲಷ್ಟೇ ಅಲ್ಲ; ಎದೆಯ ಮೇಲೂ ಚಂದನ ಹಚ್ಚಿದ್ದರು. ಮಳಲಿನಲ್ಲಿ ತಾಂಬೂಲದ ರಸ ಹರಡಿಕುಳಿತಿತ್ತು ಎಂದು ವಿವರಿಸಿದ್ದಾರೆ.
©2024 Book Brahma Private Limited.