’ರಾಜಕೀಯ ಕಥೆಗಳು’ ಕೃತಿಯು ತೆಲುಗಿನ ಖ್ಯಾತ ಕಥೆಗಾರ್ತಿ, ಲೇಖಕಿ ಓಲ್ಗಾ ಅವರ ರಾಜಕೀಯ ಕಥೆಗಳ ಕನ್ನಡಾನುವಾದ.
ಈಗಾಗಲೇ ತೆಲುಗಿನಲ್ಲಿ ಪ್ರಕಟಗೊಂಡು ಪ್ರಖ್ಯಾತಿಗಳಿಸಿದ್ದ ರಾಜಕೀಯ ಕಥೆಗಳನ್ನು ಜಿ.ವೀರಭದ್ರಗೌಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಓಲ್ಗಾ ಅವರು ಹೆಣ್ಣಿನ ದೈಹಿಕ ವ್ಯಕ್ತಿತ್ವದ ಅನನ್ಯತೆಗಳನ್ನು, ಅದರ ಮಹತ್ವವನ್ನು ನಿರಾಕರಿಸುವುದಿಲ್ಲ. ಸ್ತ್ರೀವಾದವನ್ನು ಹೀಗೆ ಅತಿರೇಖದ ಅಂಚಿಗೆ ಒಯ್ದು ಅಮಾನವೀಯಗೊಳಿಸುವ ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳನ್ನು ಹೀಗೆ ಮುಖಾಮುಖಿಯಾಗುವುದು ಕೂಡಾ ಸ್ತ್ರೀವಾದಿ ಹೋರಾಟದ ದೃಷ್ಟಿಯಿಂದ ತುಂಬ ಮುಖ್ಯವಾದದ್ದು. ದೇಹಕೋಶದಿಂದ-ಬೌದ್ಧಿಕಕೋಶದವರೆಗೆ ಚಲಿಸುವ ಇಲ್ಲಿನ ಕಥೆಗಳು ಹೆಣ್ಣಿನ ಒಳಲೋಕದ ಸ್ಪಷ್ಟ, ಅಸ್ಪಷ್ಟ ಸ್ವಗತಗಳಿಂದ ಖಚಿತ, ಮೂರ್ತ ಪ್ರಯತ್ನಗಳನ್ನು ದಾಖಲಿಸುತ್ತವೆ. ಹೆಣ್ಣಿನ ಈ ನಿಡುಗಾಲದ ಪ್ರಯಾಣದ ಸೋಲು ಗೆಲುವುಗಳನ್ನು, ತವಕ ತಲ್ಲಣಗಳನ್ನು ಈ ಕಥೆಗಳು ಪ್ರತಿನಿಧಿಸುತ್ತವೆ.
©2024 Book Brahma Private Limited.