‘ಎಲಕುಂಚವಾರ ಅವರೊಂದಿಗೆ ಸಂವಾದ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕೃತಿಯಾಗಿದೆ. ರಿಯಾಜ್ ಎರಡು ಮೂರು ಬಗೆಯಲ್ಲಿರುತ್ತದೆ. ತನ್ನನ್ನು ಸತತ ಬೌದ್ಧಿಕ ಪಾತಳಿಗೆ ಒಯ್ಯುವುದು ಸ್ವಂತಕ್ಕೆ ಸಮೃದ್ಧಗೊಳಿಸುವುದು. ಅದಕ್ಕಾಗಿ ಸತತ ಪ್ರವಾಸ, ಅನಂತ ಓದು, ಗೊತ್ತಿಲ್ಲದಿರುವುದನ್ನು ಅರಿಯುವುದು, ಇದೆಲ್ಲ ಆತ್ಮದ ಅಗತ್ಯವೆಂದು. ಸತತ ಏನಾದರೂ ಮಾಡುತ್ತಿರುವುದೇ ರಿಯಾಜ್, ರಿಯಾಜ್ ಎಂದರೆ ಬದುಕುವುದು! ನಾನು ಕೇವಲ ಒಬ್ಬ ಮಾಧ್ಯಮ ಅನುಭವ ನನ್ನ ಮಾಧ್ಯಮದ ಮೂಲಕ ವ್ಯಕ್ತವಾಗಲು ಬಯಸುತ್ತದೆ. ಹಾಗಿದ್ದರೆ ಆ ಅನುಭವ ದೊಡ್ಡದೇ. ಯಾವ ಅನುಭವವೇ ಇರಲಿ ಅದರ ಆಕಾಶ ಕಾಸ್ಮಿಕ್ ಆಗಿರುತ್ತದೆ. ಇಬ್ಬನಿಯಲ್ಲಿ ಗೋಚರಿಸುವ... ಆಕಾಶದಂತೆ ಅನುಭವವೇ ಭವ್ಯವಾಗಿದ್ದಾಗ ಅದರ ಮುಂದೆ ನಾನೆಷ್ಟರವನು? ನಾನು ಸಾಮಾನ್ಯ ಮನುಷ್ಯ ಮಿಡಿಯಾಕಾರ ಆಯುಷ್ಯವನ್ನು ಬದುಕುವವನು ಜೀವನದ ಯಾವುದೋ ಅನುಭವವು ತನ್ನನ್ನು ವಾಹಕನೆಂದು ಆಯ್ಕೆ ಮಾಡಿದ್ದರಿಂದ ನಾನು ನನ್ನನ್ನು ಧನ್ಯನೆಂದು ಕೊಳ್ಳುತ್ತೇನೆ! ನಾಮ ವಾಹಕ ಲೇಖಕನು ಅದೃಶ್ಯನಾಗಿರಬೇಕು. ಅನುಭವವು ಜೀವನದ ಒಂದು ಆವಿಷ್ಠಾರ ಜೀವನವು ನಮಗಿಂತ ಎಷ್ಟೋ ದೊಡ್ಡದಾಗಿರುತ್ತದೆ ಅದರೆದುರಿಗೆ ನಾವು ವಿನಮ್ರರಾಗಿರಬೇಕು.
©2024 Book Brahma Private Limited.