`ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು’ ಕೃತಿಯು ನಾಗಮಣಿ ಎಸ್. ಎನ್ ಹಾಗೂ ಸರಸಿಜ ಆರ್.ಸಿ ಅವರ ಅನುವಾದಿತ ಬಂಗಾಳಿ ಮೂಲದ ಪ್ರಸಿದ್ಧ ಜಾನಪದ ಕತಾಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಈ ಜಾನಪದ ಕಥೆಗಳು ಬಂಗಾಳಿಯಿಂದ ಅನುವಾದಿತವಾದವು. ಬಾಂಗ್ಲಾ ಪ್ರಾಂತ್ಯದ ಹಳ್ಳಿಯ ಆಡುಭಾಷೆಯಲ್ಲಿ 1913ರಲ್ಲಿ ರಚಿತವಾದ ಟುಂಟುಣಿ ಬೊಇ (ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು) ಬಂಗಾಳಿ ಸಾಹಿತ್ಯ ಲೋಕದಲ್ಲಿ ಒಂದು ಮೈಲಿಗಲ್ಲು. ಅಂದಿನಿಂದ ಚಿಕ್ಕವರಷ್ಟೇ ಅಲ್ಲದೆ ದೊಡ್ಡವರೂ ಕೂಡ ಓದಿ ಆನಂದಿಸಿದ, ಪಂಡಿತ ಪಾಮರರೆನ್ನದೆ ಎಲ್ಲರ ಮನ ಸೆಳೆದ, ಇಂದಿಗೂ ಬಹು ಜನಪ್ರಿಯವಾಗಿರುವ ಈ ಕತೆಗಳನ್ನು ಗುರುದೇವ ರವೀಂದ್ರನಾಥ ಟಾಗೂರರು ಬಹುವಾಗಿ ಮೆಚ್ಚಿಕೊಂಡಿದ್ದರು. ಹಾಸ್ಯರಸ ತುಂಬಿರುವ ಈ ಕತೆಗಳು ಕರುಣರಸವನ್ನೂ ಒಡಲೊಳಗೆ ಬಚ್ಚಿಟ್ಟುಕೊಂಡಿವೆ. ಮಾನವ ಪ್ರಕೃತಿಯ ಸಂಬಂಧದ ಬಗ್ಗೆ ಆಳವಾಗಿ ಆಲೋಚಿಸುವಂತೆ ಮಾಡುತ್ತವೆ, ಬಂಗಾಳಕ್ಕೆ ಮಾತ್ರ ಸೀಮಿತವಾಗದೆ ವಿಶ್ವಾತ್ಮಕ ಗುಣ ಹೊಂದಿವೆ.
©2024 Book Brahma Private Limited.