ಮನಶ್ಶಾಸ್ತ್ರದ ವಿಷಯವಾದ ಪ್ರಜ್ಞಾವಸ್ಥೆಯ ಬಗ್ಗೆ ಸರಳವಾಗಿ ತಮ್ಮ ಭಾಷಣದಲ್ಲಿ ಹಿರಿಯ ಗಾಂಧಿವಾದಿ ಆರ್. ಆರ್. ದಿವಾಕರ್ ಅವರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಸಿ.ಪಿ. ಕೃಷ್ಣಕುಮಾರ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮಹಾತ್ಮರು, ಸಾಧುಸಂತರು ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಗಳನ್ನುಮೀರಿ ಧ್ಯಾನದಿಂದ ಮತ್ತು ಯೋಗದಿಂದ ಸಂಪ್ರಜ್ಞಾತ, ಅಸಂಪ್ರಜ್ಞಾತ ಸಮಾಧಿ, ನಿರ್ವಿಕಲ್ಪ ಸಮಾಧಿಗಳಲ್ಲಿ ತುರೀಯಾವಸ್ಥೆಯನ್ನು ಹೇಗೆ ಅನುಭವಿಸಬಲ್ಲರು, ತಮ್ಮ ಪ್ರಜ್ಞೆಯ ವಿವಿಧ ಆಯಾಮಗಳ ಮೇಲೆ ಪ್ರಭುತ್ವವನ್ನು ಸಾಧಿಸಿದ್ದ ನೆಪೊಲಿಯನ್, ಗಾಂಧೀಜಿ ದಿನಕ್ಕೆ 20 ಗಂಟೆಗಳ ಕಾಲ ಹೇಗೆ ಕಾರ್ಯಪ್ರವೃತ್ತರಾಗಿರುತ್ತಿದ್ದರು, ಮಾನವನು ತನ್ನ ದೇಹದಲ್ಲಿನ ನರವ್ಯೂಹಗಳ, ಮಿದುಳಿನ ಮಿತಿಗಳನ್ನು ಹೇಗೆ ದಾಟಿ ಹೋಗಬಹುದು ಎಂಬುದನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.