‘ಸಾಮೀಪ್ಯ’ 2023ರ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿ ಶೀರ್ಷೆಂದು ಮುಖೋಪಾಧ್ಯಾಯ ಅವರ ಆಯ್ದ ಕತೆಗಳ (ನೀಳ್ಗತೆ) ಅನುವಾದ. ಈ ಕೃತಿಯನ್ನು ಲೇಖಕ ನಾಗ ಎಚ್. ಹುಬ್ಳಿ ಅವರು ಕನ್ನಡೀಕರಿಸಿದ್ದಾರೆ. ಈ ಕೃತಿಗೆ ರಾಂಚಿ ವಿಶ್ವವಿದ್ಯಾಲಯದ ಪ್ರೊ. ಶಾಂತಿ ಗಂಗೂಲಿ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ಶೀರ್ಷೆಂದು ಮುಖೋಪಾಧ್ಯಾಯ ಬಂಗಾಳಿ ಸಾಹಿತ್ಯ ಲೋಕದಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಗಮನ ಸೆಳೆದವರು. ಹದವಾದ ಭಾಷೆ ಹಾಗೂ ಸಂಯಮದ ನಿರೂಪಣೆ ಅವರ ಕಥೆಗಳಲ್ಲಿ ಕಾಣುವ ಪ್ರಧಾನ ಅಂಶಗಳು, ಕಥಾವಸ್ತುವಿನ ಆಯ್ಕೆಯ ವಿಷಯದಲ್ಲಿ ಇವರ ಎಚ್ಚರಿಕೆಯ ನಡೆ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವೇ ಪಾತ್ರಗಳ ಮೂಲಕ, ಅಚ್ಚುಕಟ್ಟಾದ ಪರಿಸರದ ವರ್ಣನೆಯೊಂದಿಗೆ ಸಾಗುವ ಇವರ ಕಥೆಗಳು ಪ್ರತಿಯೊಂದು ಹಂತದಲ್ಲಿಯೂ ಕುತೂಹಲವನ್ನು ಕಾಪಾಡಿಕೊಳ್ಳುತ್ತವೆ ಎನ್ನುವುದು ಗಮನೀಯ. ಶೀರ್ಷೇಂದುರವರು ವಿವಿಧ ಕಾಲಘಟ್ಟದಲ್ಲಿ ಬರೆದಿರುವ ಕಥೆಗಳನ್ನು ಆಯ್ದು ಒಂದು ಕಡೆಯಲ್ಲಿ ನೀಡುವ ಪ್ರಯತ್ನ ಶ್ಲಾಘನೀಯ. ಬಂಗಾಳದ ಪರಿಸರ, ಕುಟುಂಬ ವ್ಯವಸ್ಥೆ, ಚಿಂತನಾ ವಿಧಾನ, ಜೀವನಶೈಲಿ ಇತ್ಯಾದಿಗಳ ಮೇಲೆಯೂ ಇಲ್ಲಿನ ಕಥೆಗಳು ಬೆಳಕು ಚೆಲ್ಲುತ್ತವೆ. ಕಥೆಗಳ ಆಯ್ಕೆಯಲ್ಲಿಯೂ ಜಾಗರೂಕತೆ ಕಂಡುಬರುತ್ತದೆ. ಓದಿದ ನಂತರ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಕಥೆಗಳನ್ನು ಶೀರ್ಷೇಂದುರವರು ಅಭಿನಂದನಾರ್ಹರು ಎಂದಿದ್ದಾರೆ. ಜೊತೆಗೆ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನಾಗ ಹುಬ್ಬಿಯವರು ಅತ್ಯಂತ ಸರಳ ರೂಪದಲ್ಲಿ ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಈ ಕತೆಗಳನ್ನು ತಂದಿದ್ದಾರೆ. ಕನ್ನಡ ಪುಸ್ತಕ ಲೋಕಕ್ಕೆ ಈ ಕೃತಿ ಒಂದು ಉತ್ತಮ ಸೇರ್ಪಡೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.