ಲೇಖಕ ರಾಜನ್ ಗವಸ್ ಅವರ ‘ಭಂಡಾರ ಭೋಗ’ ಮರಾಠಿ ಕಾದಂಬರಿಯನ್ನುಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಗೆ ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ (2008) ಲಭಿಸಿದೆ. ಮನುಷ್ಯನಿಗೆ ಸಂಬಂಧಿಸಿದ ಸಾಮುದಾಯಿಕ ವಿವರಗಳು ಇಲ್ಲಿಯ ಕಥಾ ವಸ್ತು. ಸಮಾಜದ ಸಾಂಸ್ಕೃತಿಕ, ಧಾರ್ಮಿಕ ರೂಢಿ ವ್ಯವಸ್ಥೆಯ ಮಹತ್ವವನ್ನು ಕಟ್ಟಿಕೊಡಲಾಗಿದೆ.
ರಾಜನ್ ಗವಸರು ಮರಾಠಿ ಕಾದ೦ಬರಿ ಲೋಕದ ಕ್ರಿಯಾತ್ಮಕ ಬರಹಗಾರರು. ಮನುಷ್ಯನನ್ನು ಕೇಂದ್ರದಲ್ಲಿರಿಸಿಕೊಂಡು ಸಾಮಾಜಿಕ ಸಂಗತಿಗಳನ್ನು ಸಶಕ್ತವಾಗಿ ಸೂಕ್ಷ್ಮವಾಗಿ ಬರೆಯುವವರು. ತಮ್ಮ ಬರವಣಿಗೆ ಮೂಲಕ ಸಮಾಜದಲ್ಲಿ ರೂಢಿಯ ಹೆಸರಿನಲ್ಲಿ ನಡೆಯುವ ಅಮಾನುಷ ಕೌರ್ಯ, ಸ್ವಾರ್ಥ ಸಾಧನೆಯನ್ನು ಬಯಲುಮಾಡುತ್ತಾ ಬಂದಿದ್ದಾರೆ. ಈ ಕಾದಂಬರಿಯಲ್ಲಿ ರೂಢಿ-ಪರಂಪರೆಯ ಹೆಸರಿನಲ್ಲಿ ದೇವರಿಗೆ ಬಿಟ್ಟ ಜೋಗಪ್ಪನ ನರಕಸದೃಶ ಜೀವನದ ಚಿತ್ರಣವನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ. 'ತಾಯಪ್ಪ'ನ ಪಾತ್ರದ ಸುತ್ತ ನಡೆಯುವ ಘಟನೆಗಳ ಮೂಲಕ ನಿರ್ದಿಷ್ಟ ಜನಾಂಗವೊಂದರ ಸಾಂಸ್ಕೃತಿಕ, ಧಾರ್ಮಿಕ ರೂಢಿವ್ಯವಸ್ಥೆಯ ಅಂಧಶ್ರದ್ಧೆಯನ್ನು ಪರಿಚಯಿಸುತ್ತಾ, ಚಿಂತನೆಗೆ ಹಚ್ಚಿಸುತ್ತಾರೆ. ಈಗಾಗಲೇ ಹಲವು ಮರಾಠಿ ಕೃತಿಗಳನ್ನು ಕನ್ನಡದಲ್ಲಿ ಸಮರ್ಥವಾಗಿ ನೀಡಿರುವ ಚಂದ್ರಕಾಂತ ಪೋಕಳೆಯವರು ಅನುವಾದ ಮಾಡಿದ್ದಾರೆ.
ಪುಸ್ತಕ ಪರಿಚಯ- ಕೃಪೆ:ಹೊಸತು
©2024 Book Brahma Private Limited.