ಟಿ.ಎಸ್.ವಿವೇಕಾನಂದ ಅವರ ‘ಜಿಮ್ ಕಾರ್ಬೆಟ್ ನ ಶಿಕಾರಿ ಕತೆಗಳು’ ಕನ್ನಡ ರೂಪಾಂತರದ ಕೃತಿಯಾಗಿದೆ. ಈ ಕೃತಿಗೆ ಪಿ.ಲಂಕೇಶ್ ಬೆನ್ನುಡಿ ಬರೆದಿದ್ದಾರೆ. ‘ಜಿಮ್ ಕಾರ್ಬೆಟ್ ಭಾರತದಲ್ಲಿ ಹುಟ್ಟಿದ ಇಂಗ್ಲಿಷ್ ಮನ್; ಅವನ ಮುತ್ತಜ್ಜ ಭಾರತಕ್ಕೆ ಬಂದಿದ್ದ. ಹದಿನೆಂಟನೆ ಶತಮಾನದಲ್ಲಿ ಭಾರತಕ್ಕೆ ಬಂದು ಉತ್ತರ ಭಾರತದ ಹಲವಾರು ಕಡೆ ಬದುಕು ಕೊನೆಗೆ ನೈನಿತಾಲ್ ನ ಗುಡ್ಡಗಾಡಿನ ಸರೋವರದ ಮಗ್ಗುಲಲ್ಲಿ ನೆಲೆಸಿದ ಕುಟುಂಬದಲ್ಲಿ ಕಾಡಿನ ನಡುವಿನ ಮನೆಯಲ್ಲಿ ಹುಟ್ಟಿದವನು ಜಿಮ್ ಕಾರ್ಬೆಟ್. ಚಾಟರ್ ಬಿಲ್ , ಕವಣೆಯನ್ನು ಪುಟ್ಟ ಎಂಟು ವರ್ಷದ ಹುಡುಗನಾಗಿ ಬಳಸುತ್ತಿದ್ದ ಈತ ಸುಮಾರು ಹನ್ನೆರಡು ವರ್ಷದವನಿದ್ದಾಗ ರೈಫಲ್ ಪಡೆದ. ಅದು ಅವನಿಗೆ ಧೈರ್ಯ ನೀಡಿತು. ತನ್ನ ನಾಯಿಯೊಂದಿಗೆ ಕಾಡನ್ನೆಲ್ಲಲೆಯುತ್ತಿದ್ದ ಈತ ಕ್ರಮೇಣ ಕರೆ, ಸರೋವರ, ಹಕ್ಕಿಗಳು, ಮರಗಿಡಬಳ್ಳಿಗಳು, ಪ್ರಾಣಿಗಳ ಬಗ್ಗೆ ಅರಿತ. ಅರಣ್ಯಪ್ರದೇಶದ ಹಳ್ಳಿಯ ಜನರೊಂದಿಗೆ ಹಿಂದಿ ಮತ್ತು ಸ್ಥಳೀಯ ಉಪಭಾಷೆಗಳಲ್ಲಿ ಮಾತನಾಡುತ್ತಿದ್ದ ಈತ ಗ್ರಾಮದ ಜನರ ಸಖನಾದ. ಅವರನ್ನು ಕಾಡಿ ಕೊಂದುಹಾಕುತ್ತಿದ್ದ ಹುಲಿ, ಚಿರತೆಯನ್ನು ಬೇಟೆಯಾಡಿದ. ಬೇಟೆಯನ್ನು ಮಹಾ ಕ್ರೀಡೆಯ ಮಟ್ಟಕ್ಕೆ ಏರಿಸುವುದನ್ನು ಸಾಧ್ಯವಾಗಿಸಿದ್ದು, ಆತನಿಗೆ ಪ್ರಕೃತಿಯಲ್ಲಿದ್ದ ಅಪಾರ ಕುತೂಹಲ, ಅಸಾಧ್ಯ ಪ್ರೇಮ. ಗಾಳಿ ಯಾವಕಡೆಯಿಮದ ಬೀಸಿದರೆ ಈ ನರಭಕ್ಷಕನನ್ನು ಹುಡಕಬಹುದು, ನರಭಕ್ಷಕನ ಸುಳಿವಿನಿಂದ ಹಕ್ಕಿ, ಜಿಂಕೆ ಮುಂತಾದುವು ಯಾವ ಶಬ್ದ ಮಾಡುತ್ತವೆ, ಚಿರತೆಯಂತೆ, ಹುಲಿಯಂತೆ, ಹಂದಿಯಂತೆ ಸದ್ದು ಮಾಡುವುದು ಹೇಗೆ, ಯಾವ ಹಣ್ಣನ್ನು ಯಾವ ಪ್ರಾಣಿ ತಿನ್ನುತ್ತವೆ, ಹುಲಿ ಏಕೆ ನರಭಕ್ಷಕ ಆಗುತ್ತವೆ, ಎಲ್ಲವನ್ನೂ ಕಲಿಯುತ್ತಾ ಹೋದ ಈತಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಹವಾಮಾನ, ಭೂಮಿಯ ಮೇಲ್ಮೈ ಲಕ್ಷಣಗಳು,ಸಸ್ಯಗಳ ಮೂಲಿಕೆ ಗುಣಗಳು ಎಲ್ಲವನ್ನೂ ಅರಿತಿದ್ದ’ ಎಂಬುದಾಗಿ ಪಿ.ಲಂಕೇಶ್ ಈ ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಚಾವಫರ್ ನ ನರಭಕ್ಷಕಗಳು, ರಾಬಿನ್, ಮೋಹನದ ನರಭಕ್ಷಕ, ನನ್ನ ಕನಸಿನ ಮೀನುಗಳು,ಪೈಪಲ್ ಪಾನಿಯ ಹುಲಿ, ಪೊವೆಲ್ ಫರ್ ನ ಏಕಾಂಗಿ, ಕೇವಲ ಹುಲಿಗಳು ಎಂಬ ಏಳು ಕಥೆಗಳಿವೆ..
©2024 Book Brahma Private Limited.