ಮೃತ್ಯುಂಜಯ ಶರ್ಮ ವಿರಚಿತ ಅವರ ‘ರಾಜಾವಳಿ’ ಕೃತಿಯನ್ನು ನಾಗ ಎಚ್. ಹುಬ್ಳಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಡಾ. ಅಜಕ್ಕಳ ಗಿರೀಶ್ ಭಟ್ಟ್ ಅವರ ಬೆನ್ನುಡಿ ಬರಹವಿದೆ: ಭಾರತೀಯರು ಇತಿಹಾಸವನ್ನು ನೋಡುವ ಮತ್ತು ದಾಖಲಿಸುವ ಬಗೆ ಬೇರೆ ರೀತಿಯದು ಎಂಬ ಅಭಿಪ್ರಾಯವನ್ನೂ ಹಲವರು ನೀಡಿದ್ದಾರೆ. ರಾಜರ ಇತಿಹಾಸವನ್ನು ದಾಖಲಿಸಿದ ಒಂದು ಬಗೆಯಾಗಿ ಕಲ್ದಣನ ರಾಜತರಂಗಿಣಿ ಕೃತಿಯನ್ನು ನೋಡುತ್ತೇವೆ. ಅದನ್ನು ಸ್ವಲ್ಪ ಮಟ್ಟಿಗೆ ಹೋಲುವ ರೀತಿಯ ಕೃತಿ ಇದು. ಸಂಸ್ಕೃತ ವಿದ್ವಾಂಸರೂ ಆಗಿದ್ದ ಮೃತ್ಯುಂಜಯ ಶರ್ಮ ಅವರು ಇನ್ನೂರು ವರ್ಷಗಳಿಗೂ ಹಿಂದೆ ಬಂಗಾಳಿಯಲ್ಲಿ ಬರೆದ ಕೃತಿ ಇದೀಗ ಕನ್ನಡೆದಲ್ಲಿ ಹೊರಬರುತ್ತಿದೆ. ಕನ್ನಡದಲ್ಲಿಯೂ ರಾಜಾವಳಿ ಕಥೆಯೊಂದಿದೆ. ಅದರಜೊತೆಗೆ ಇದನ್ನು ಹೋಲಿಸಿ ಅಧ್ಯಯನ ಮಾಡಲು ಅವಕಾಶವಿದೆ ಎಂಬುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...
READ MORE