ಭಾರತೀಯ ಸೇನೆಯ ಇತಿಹಾಸದಲ್ಲಿ ಕರಾಳವಾಗಿ ನೆನೆಯಲ್ಪಡುವ ಘಟನೆಯೆಂದರೆ 1962ರಲ್ಲಿ ನಡೆದ ಇಂಡೋ-ಚೀನಾ ಯುದ್ಧ. ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಗೇಡಿಯರ್ ಜಾನ್ ಪಿ ದಳವಿ ಅವರು ಇಂಗ್ಲೀಷ್‍ನಲ್ಲಿ ಬರೆದಂತಹ ‘ಹಿಮಾಲಯನ್ ಬ್ಲಂಡರ್’ ಕೃತಿಯ ಕನ್ನಡಾನುವಾದವನ್ನು ಲೇಖಕರು ಮತ್ತು ಪತ್ರಕರ್ತರಾದ ರವಿ ಬೆಳಗೆರೆಯವರು ಮಾಡಿದ್ದಾರೆ. ಯುದ್ಧದ ಕಾಲದಲ್ಲಿ ಭಾರತೀಯ ಸೈನಿಕರು ಪಟ್ಟ ಕಷ್ಟ ಕೋಟಲೆಗಳ ಕುರಿತು ಯಥಾವತ್ತಾಗಿ ವರ್ಣಿಸಿದ್ದಾರೆ ದಳವಿ ಅವರು. ಮೈ ಕೊರೆಯುವ ಚಳಿಯಲ್ಲಿ ಯೋಧರು, ಧರಿಸಲು ಸರಿಯಾದ ಉಡುಪುಗಳಿಲ್ಲದೆ, ಶೂಗಳಿಲ್ಲದೆ ಯಾವ ರೀತಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮನಕಲಕುವ ರೀತಿಯಲ್ಲಿ ದಳವಿ ಅವರು ವಿವರಿಸುತ್ತಾ ಹೋಗುತ್ತಾರೆ. ಯುದ್ಧದ ಸಮಯದಲ್ಲಿ ಭಾರತದಲ್ಲಿದ್ದ ರಾಜಕೀಯ ಪರಿಸ್ಥಿತಿ, ನೆಹರೂ ಅವರು ತೆಗೆದುಕೊಂಡಂತಹ ತಪ್ಪು ನಿರ್ಧಾರಗಳು, ಆ ನಿರ್ಧಾರಗಳಿಂದ ಭಾರತೀಯ ಸೇನೆ ಅನುಭವಿಸಿದಂತಹ ನಷ್ಟ ಹೀಗೆ ಯಾವ ರೀತಿ ರಾಜಕೀಯ ನಿರ್ಧಾರಗಳು ಸೇನೆಯನ್ನು ಭಾದಿಸುತ್ತವೆ ಎನ್ನುವುದರ ಅರಿವನ್ನು ಈ ಪುಸ್ತಕ ನೀಡುತ್ತದೆ. ಈ ಪುಸ್ತಕವು ಓದುಗರಲ್ಲಿ ಭಾರತೀಯ ಸೇನೆಯ ಕುರಿತಾದ ಹೆಮ್ಮೆಯ ಭಾವನೆಯನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.
©2024 Book Brahma Private Limited.