ವಿದ್ವಾಂಸರು, ಸಾಹಿತಿಗಳಾದ ಡಿ.ಆರ್.ನಾಗರಾಜ, ಯು.ಆರ್.ಅನಂತಮೂರ್ತಿ, ಸ್ಟ್ರೀಫನ್ ಗ್ರೀನ್ ಬ್ಲ್ಯಾಟ್, ಏಜಾಜ್ ಅಹಮದ್ ಹಾಗೂ ಹರೀಶ್ ತ್ರಿವೇದಿಯವರೊಂದಿಗೆ ವಿಮರ್ಶಕ ಎನ್. ಮನು ಚಕ್ರವರ್ತಿ ಅವರು ಇಂಗ್ಲಿಷ್‌ನಲ್ಲಿ ನಡೆಸಿದ ಸಂದರ್ಶನವನ್ನು ಎಲ್.ಜಿ. ಮೀರಾ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಕೃತಿ ’ಬಹುಮುಖ’. ಇದು ವಸಾಹತೋತ್ತರ ಜಗತ್ತಿನೊಂದಿಗೆ ಸಾರಸ್ವತಲೋಕದ ದಿಗ್ಗಜರು ನಡೆಸಿರುವ ಚಿಂತನ ಮಂಥನವೂ ಹೌದು.
ಸಾರಸ್ವತ ಲೋಕದ ದಿಗ್ಗಜರೊಂದಿಗೆ ನಡೆಸಿದ ಈ ಸಂವಾದ ಒಂದು ಕಾಲಘಟ್ಟಕ್ಕೆ ಹಿಡಿದ ಕನ್ನಡಿಯಂತೆಯೂ ಹೌದು. ಬಡತನದಿಂದ ಬಂಡವಾಳಶಾಹಿತ್ವದವರೆಗೆ, ವಿಕೃತಿಯಿಂದ ಸಂಸ್ಕೃತಿಯವರೆಗೆ ಅನೇಕ ವಿಷಯಗಳು ಈ ಮಾತುಕತೆಯಲ್ಲಿ ಹಾದುಹೋಗಿವೆ.
ನಾಡಿನ ಅಪರೂಪದ ಚಿಂತಕ ಡಿ. ಆರ್. ನಾಗರಾಜ್ ಅವರ ನೆನಪಿನಲ್ಲಿ ಅಕ್ಷರ ಪ್ರಕಾಶನ ’ಅಕ್ಷರ ಚಿಂತನ’ ಎಂಬ ಪುಸ್ತಕ ಮಾಲೆಯೊಂದನ್ನು ಪ್ರಕಟಿಸಿತು. ಆ ಮಾಲಿಕೆಯ ಒಂದು ಕೃತಿ ’ಬಹುಮುಖ’.
©2024 Book Brahma Private Limited.