'ಆಡುಂಬೊಲ' ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕಾದಂಬರಿಯ ಕನ್ನಡಾನುವಾದ. ತಟ್ಟಕಮ್ (ಆಡುಂಬೊಲ) ಕಾದಂಬರಿಯಲ್ಲಿ 'ಮುಪ್ಪಿಲಶೇರಿ' ಪ್ರದೇಶದ ಸ್ಥಳಪುರಾಣ, ಜನರ ಬದುಕು ಬವಣೆ , ಶೈಕ್ಷಣಿಕ , ರಾಜಕೀಯ. ಧಾರ್ಮಿಕ ಸ್ಥಿತ್ಯಂತರಗಳೇ ಮುಂತಾದ ಅನೇಕ ಆಯಾಮಗಳನ್ನು ಪ್ರಾಗೈತಿಹಾಸಿಕ ಕಾಲದಿಂದ ಆಧುನಿಕ ಕಾಲದ ವರೆಗೆ ವಿಶ್ಲೇಷಣಾತ್ಮಕವಾಗಿ ಕಟ್ಟಿಕೊಡಲಾಗಿದೆ.
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE