ಅಘೋರಿಗಳ ನಡುವೆ

Author : ಎಂ.ವಿ ನಾಗರಾಜರಾವ್

Pages 190




Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಗುಜರಾತಿ ಲೇಖಕ ಸುರೇಶ್ ಸೋಮಪುರ ಅವರು 43 ವರ್ಷಗಳ ಹಿಂದೆ ಬರೆದ ʻಅಘೋರಿಯೋ ಸಾಥೆ ಪಾಂಚ್ ದಿವಸ್ʼ ಕೃತಿಯ ಕನ್ನಡ ಅನುವಾದ ʻಅಘೋರಿಗಳ ನಡುವೆʼ. ಎಂ.ವಿ. ನಾಗರಾಜರಾವ್‌ ಅವರು ಕನ್ನಡಕ್ಕೆ ತಂದ ಈ ಪುಸ್ತಕದಲ್ಲಿ ಅಘೋರಿಗಳ ಅಘೋರ ಜೀವನದ ಬಗ್ಗೆ ಹೇಳಲಾಗಿದೆ. ಇವರದು ಒಂದು ನಿಗೂಢ ಲೋಕ. ಗೆಳೆಯನೊಬ್ಬನಿಗಾಗಿ ಅಘೋರಿಗಳ ಮೂಲವನ್ನು ಹುಡುಕುತ್ತಾ ಹೋಗುವ‌ ಲೇಖಕರಿಗೆ ಅವರ ಸಾಧನಾ ಶಿಬಿರ ನಡೆಯುವುದು ತಿಳಿಯುತ್ತದೆ. ತಮ್ಮ ಕಾಂಟ್ಯಾಕ್‌ಗಳನ್ನು ಬಳಸಿಕೊಂಡು 5 ದಿನಗಳ ಕಾಲ ಅವರ ಚಲನ ವಲನಗಳನ್ನು ಗಮನಿಸಿ ಬಳಿಕ ಅಘೋರಿಗಳು ತೋರಿಸುವ ಕೆಲ ಚಮತ್ಕಾರದ ಹಿಂದಿನ ಮರ್ಮವನ್ನು ಲೇಖಕರು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಕೆಲ ಅಘೋರಿಗಳು ಮಾತ್ರ ತಮ್ಮ ಅಹಂನ್ನು ಬಿಟ್ಟು ದೇಹತ್ಯಾಗ ಮಾಡಿದ್ದು ವಿಶೇಷವಾಗಿದೆ. ಅಘೋರಿಗಳು ಸಾಮಾಜಿಕರಾಗಿರದೆ ತಮ್ಮದೇ ಜೀವನ ಶೈಲಿಯನ್ನು ರೂಢಿಸಿಕೊಂಡು ಬದುಕುವವರು. ಇವರ ಬಗ್ಗೆ ಇಂದಿಗೂ ಜನರಲ್ಲಿ ಹಲವಾರು ಬಗೆಯ ತಪ್ಪು ಕಲ್ಪನೆಗಳಿವೆ. ಹಾಗಾಗಿ ನಿಜವಾಗಿಯೂ ಅಘೋರಿಗಳು ಯಾರು, ಅವರ ಜೀವನ ಹೇಗಿರುತ್ತದೆ, ಆಚಾರ ವಿಚಾರಗಳು ಹೇಗೆ ಭಿನ್ನವಾಗಿವೆ, ಅವರ ನಂಬಿಕೆಗಳು ಹೀಗೆ ಎಲ್ಲ ಮಾಹಿತಿಗಳನ್ನು ನೀಡುವ ಒಂದು ಪ್ರಯತ್ನ ಇಲ್ಲಿ ನಡೆದಿದೆ.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books