ಲೇಖಕ ಶ್ರೀಕಾಂತ ಬಾಬು ಅವರ ಕೃತಿ ’ಅನುವಾದ ಸಂವಾದ’. ಈ ಕೃತಿಯು ಮುಖ್ಯವಾಗಿ ಭಾಷಾಂತರ ಸಂದರ್ಭದಲ್ಲಿ ಅನುವಾದಕರು ಮತ್ತು ತನ್ನ ವ್ಯಕ್ತಿತ್ವವನ್ನು ಅಮಾನತ್ತಿನಲ್ಲಿ ಇರಿಸಬೇಕೆಂಬ ವಿಚಾರವನ್ನು, ಮತ್ತು ಮೂಲ ಕೃತಿಯ ವಸ್ತುವಿನೊಂದಿಗೆ ಮಾತ್ರವಲ್ಲದೆ ಕೃತಿಕಾರನೊಂದಿಗೂ ಏಕತೆಯನ್ನು ಸಾಧಿಸುವ ಅಗತ್ಯತೆ, ಪ್ರಾಮುಖ್ಯತೆಯನ್ನೂ ಅರಿಯುವ ಉದ್ದೇಶವನ್ನುಈ ಕೃತಿ ಪ್ರಸ್ತುತ ಪಡಿಸುತ್ತದೆ.
”ಮೂಲ ಲೇಖಕನಿಗಿಂತಲೂ ಆನುವಾದಕನೇ ಹೆಚ್ಚು ಪ್ರತಿಭಾಶಾಲಿಯಾದಾಗಲಂತೂ ಈ ಸಮಸ್ಯೆ ಇನ್ನಷ್ಟು ತೀವ್ರತರವಾಗುತ್ತದೆ. ಇದನ್ನೇ ಕೀಟ್ಸ್ "ನಕಾರಾತ್ಮಕ ಸಾಮರ್ಥ್ಯ" (Negative capability) ಎಂದಿದ್ದಾನೆ. ಬೇಂದ್ರೆ ಮತ್ತು ಪು.ತಿ.ನ. ಇಂಥ ಶ್ರೇಷ್ಠರು. ಇದಕ್ಕೆ ವಿರುದ್ಧವಾಗಿ ಆ ಎತ್ತರಕ್ಕೆ ಏರಲಾರದ ಅನುವಾದಕ ಕುಗ್ಗಿ ಹೋಗುತ್ತಾನೆ. ಮೊದಲ ವರ್ಗದವರನ್ನು 'ಉರ್ಧಾನುವಾದ' (Over translation) ಆದರೆ, ಎರಡನೆಯ ವರ್ಗದವರದ್ದು 'ಅಧೋನುವಾದ'ವಾಗುತ್ತದೆ’ ಎಂಬ ಹಿನ್ನಲೆಯಲ್ಲಿ ಈ ಪುಸ್ತಕವು ಹೆಚ್ಚು ಪ್ರಸ್ತುತವಾಗಿದೆ.
©2024 Book Brahma Private Limited.