ಲೇಖಕ ಸಂತೋಷ್ ನಂಬಿಯಾರ್ ಅವರು ಇಂಗ್ಲೀಷಿನಲ್ಲಿ ರಚಿಸಿದ ಕೃತಿಯ ಕನ್ನಡ ಅನುವಾದ ʻಭಯಮುಕ್ತ ಬದುಕಿನೆಡೆಗೆʼ. ಲೇಖಕ ಶೀನಾ ನಾಡೋಳಿ ಅವರು ಕನ್ನಡಕ್ಕೆ ತಂದಿರುವ ಈ ಪುಸ್ತಕವು ಯಶಸ್ವಿ ಬದುಕಿನ ಸೂತ್ರಗಳ ಬಗ್ಗೆ ಹೇಳುತ್ತದೆ. ಅದೃಷ್ಟಕ್ಕಾಗಿ ಕಾಯುತ್ತಾ ಕುಳಿತರೆ ಯಾವಾಗಲೂ ಭಯ ಮತ್ತು ಆತಂಕದಲ್ಲಿ ಬದುಕಬೇಕಾಗುತ್ತದೆ. ಆದರೆ ಸರಿಯಾದ ಉದ್ದೇಶ ಮತ್ತು ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿ ಮುನ್ನಡೆದರೆ ಎದುರಾಗುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಪಡೆಯಬಹುದು. ಇನ್ನು, ಯೋಚನೆಯ ಚಲನೆ ನಿಂತು ಸುಳ್ಳು, ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು ಎನ್ನುತ್ತಾರೆ ಸಂತೋಷ್ ಅವರು.
ಶೀನಾ ನಾಡೋಳಿಯವರು ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮದ ನಾಡೋಳಿಯವರು. ಕುಜುಂಬ ಅಜಿಲ ಮತ್ತು ಬಿಡುಗು ದಂಪತಿಯ ಪುತ್ರರಾಗಿರುವ ಇವರು, ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಂಜ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನಲ್ಲಿ ಪೂರೈಸಿದ್ದಾರೆ. ಮಂಗಳೂರು ವಿಶ್ಯಾವಿದ್ಯಾನಿಲಯದಿಂದ ಇಂಗ್ಲೀಷ್ ಎಂ.ಎ. ಸ್ನಾತಕೋತ್ತರ ಪದವೀಧರರಾಗಿರುವ ಇವರು ನೀನಾಸಂ ನಲ್ಲಿ ಒಂದು ವರ್ಷ ಡಿಪ್ಲೊಮಾ ಮತ್ತು ಒಂದು ವರ್ಷ ತಿರುಗಾಟ ನಾಟಕದಲ್ಲಿ ಅಭಿನಯಿಸಿದ್ದಾರೆ. ರಂಗನಿರ್ದೇಶಕರಾಗಿರುವ ಇವರು ಮಕ್ಕಳಿಗೆ ನಾಟಕ ತರಬೇತಿಗಳನ್ನು ನೀಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಇವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪುಂಜಲಕಟ್ಟೆ ಸ.ಪ.ಪೂ.ಕಾಲೇಜಿನಲ್ಲಿ ...
READ MORE