ಎಂ. ಉಷಾ ಅವರು 'ಕನ್ನಡದ ಮ್ಯಾಕ್‌ಬೆತ್‌ಗಳು' ಎನ್ನುವ ಬಹುಭಾಷಾಂತರ ಪ್ರಕ್ರಿಯೆಯ ಅಧ್ಯಯನವನ್ನು ಕೃತಿ ರೂಪಕ್ಕೆ ತಂದಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ, ’ವಿಶ್ವ ನಾಟಕ ಚರಿತ್ರೆಯಲ್ಲಿ ಷೇಕ್ಸ್‌ಪಿಯರ್‌ನ ಸ್ಥಾನ ಹಿರಿದು. ಮನುಷ್ಯನ ಸ್ವಭಾವದ ಆಳ-ಅಗಲಗಳನ್ನು ಅತ್ಯಂತ ಸೂಕ್ಷ್ಮ ನೆಲೆಯಲ್ಲಿ ಗ್ರಹಿಸಿದ ಷೇಕ್ಸ್‌ಪಿಯರ್ ಈ ಸ್ಥಾನಕ್ಕೆ ತಕ್ಕುದಾದಂತಹವನೇ! ಆತನ ಪ್ರಭಾವಕ್ಕೆ ಕನ್ನಡ ನಾಟಕ ಪರಂಪರೆಯೂ ಹೊರತಲ್ಲ. ಅದನ್ನು ಹಿನ್ನೆಲೆಯಾಗಿಟ್ಟುಕೊಂಡು ಡಾ. ಎಂ. ಉಷಾ ಅವರು ಈ ಅಧ್ಯಯನವನ್ನು ಮಾಡಿದ್ದಾರೆ. ನವೋದಯ ಪೂರ್ವದ ಅಸಕ್ತಿಯ ಕೇಂದ್ರವಾದ 'ಅನುವಾದ ಸಾಹಿತ್ಯ' ಇಂದು ಸೃಜನಶೀಲತೆಯ ಭಾಗವಾಗಿಯೇ ಬೆಳೆದು ನಿಂತಿದೆ. ಅದರ ಪ್ರಭಾವ ಸೃಜನಶೀಲತೆಯ ಮೇಲೆ ಅಗಾಧವಾಗಿರುವ ಈ ಸಂದರ್ಭದಲ್ಲಿ ಇಂತಹ ಕೃತಿಯ ಮಹತ್ವ ಇನ್ನೂ ಹೆಚ್ಚಾಗಿದೆ’ ಎಂದಿದ್ದಾರೆ.
©2024 Book Brahma Private Limited.