'ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು' ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಅದರಲ್ಲಿ ವಿಮರ್ಶೆ ಸಂಶೋಧನಾ ಕ್ಷೇತ್ರಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಅನುವಾದ ಸಾಹಿತ್ಯದ ಮೇಲೆ ನಡೆದ ಚರ್ಚೆಗೆ ನೀಡಿದ ಮಹತ್ವದ ಕೃತಿಯಾಗಿದೆ. ಕನ್ನಡದಲ್ಲಿ ಬಂದ ಅನುವಾದ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಆರ್. ತಾರಿಣಿ ಶುಭದಾಯಿನಿಯವರು ಬಹಳ ವ್ಯವಸ್ಥಿತವಾಗಿ, ಮೌಲಿಕವಾಗಿ ಬರೆದು ಪ್ರಸ್ತುತಪಡಿಸಿದ್ದಾರೆ. ಒಟ್ಟು ಇದರಲ್ಲಿ ಹದಿಮೂರು ಮೌಲಿಕವಾದ ಲೇಖನಗಳಿವೆ.
ಬಿ.ಎಂ.ಶ್ರೀ ಯವರ 'ಇಂಗ್ಲೀಷ್ ಗೀತೆಗಳ ಪಯಣ' ಲೇಖನವಂತೂ ಕನ್ನಡ-ಇಂಗ್ಲೀಷ್ ಭಾಷೆಗಳ ಸೌಂದರೀಕರಣ ಹೆಚ್ಚಿಸುವುದಾಗಿದೆ. ಅವರು ಕನ್ನಡ-ಇಂಗ್ಲೀಷ್ ಎರಡೂ ಭಾಷೆಗಳ ಬೋಧಕರಾಗಿರುವುದರಿಂದ, ಎರಡೂ ಭಾಷೆಗಳು ಬಲ್ಲ ಸವ್ಯಸಾಚಿಯಾಗಿರುವುದರಿಂದ ಇವಳ ತೊಡುಗೆ- ಉಡುಗೆಗಳು ಅವಳಿಗುಡಿಸಿ, ಇವಳಿಗುಡಿಸಿ, ಹಾಡಬಯಸಿದ ವ್ಯಕ್ತಿಗಳವರು. ಇದೇ ರೀತಿ ಇಲ್ಲಿಯ ಎಲ್ಲ ಲೇಖನಗಳು ಪ್ರಬುದ್ಧ, ಪ್ರೌಢ ಮತ್ತು ಮೌಲಿಕವಾಗಿವೆ. ಅನುವಾದ ಸಾಹಿತ್ಯದ ಪರಂಪರೆಯನ್ನು ಹಾಗೂ ದಾರಿಯನ್ನು ಗುರುತಿಸಿದ ಪ್ರಬುದ್ಧ ಲೇಖಕರಾಗಿದ್ದಾರೆ. ಅಪರೂಪದ ಕೃತಿಗಳಲ್ಲಿ ಇದೂ ಒಂದಾಗಿದೆ.
©2024 Book Brahma Private Limited.