ಲೇಖಕಿ ಹೇಮಾ ಹೆಬ್ಬಗೋಡಿ ಅವರ ಅನುವಾದಿತ ಕೃತಿ ʻನೆನಪಿನೋಣಿಯಲ್ಲಿ: ಅಕಿರಾ ಕುರೋಸೋವಾ ಆತ್ಮಕತೆʼ. ಚಿತ್ರಜಗತ್ತಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾನ್ ನಿರ್ದೇಶಕ ಎಂದೇ ಮನ್ನಣೆ ಪಡೆದಿರುವ ಜಪಾನಿನ ಚಿತ್ರ ನಿರ್ದೇಶಕ ಅಕಿರಾ ಕುರೋಸೋವಾ. 5 ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು ಇಂದಿಗೂ ಸಿನಿಮಾ ಪ್ರಿಯರಿಗೆ ಅಚ್ಚುಮೆಚ್ಚು ಹಾಗೂ ದಾರಿದೀಪ. ʻರಾಶೋಮನ್ʼ ಇವರ ಅತ್ಯಂತ ಪ್ರಸಿದ್ದಿಯನ್ನು ಪಡೆದ ಹಾಗೂ ಹೆಸರನ್ನೂ ತಂದುಕೊಟ್ಟ ಚಿತ್ರವಾಗಿದೆ. ಹೀಗೆ ಸಹ ನಿರ್ದೇಶಕನಾಗಿ ಚಿತ್ರ ರಂಗ ಪ್ರವೇಶಿಸಿ ಬಳಿಕ ಸುಮಾರು 33 ಚಿತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದ ಅಕಿರಾ ಅವರ ಜೀವನ ಕತೆಯನ್ನು ಇಲ್ಲಿ ಹೇಳಲಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಕಲಾವಿದನಾಗಿ ಬಂದ ಬಾಲ್ಯದ ನೆನಪು, ತನ್ನ ಜೀವನಕ್ಕೆ ಅಣ್ಣನ ಪ್ರಭಾವ, ನೋವುಗಳು, ವಿಶ್ವ ಶ್ರೇಷ್ಠ ಸಿನಿಮಾಗಳನ್ನು ನಿರ್ದೇಶಿಸಿದ ಸಾಹಸ, ಜಗತ್ಪ್ರಸಿದ್ದ ಸಿನಿಮಾಕರ್ಮಿಯಾದ ಬಗೆ ಹೀಗೆ ಅಕಿರಾ ಅವರ ಸಂಪೂರ್ಣ ಜೀವನ ಕತೆಯನ್ನು ಹೇಮಾ ಹೆಬ್ಬಗೋಡಿ ಅವರು ಕನ್ನಡಿಗರಿಗೆ ತಲುಪಿಸಿದ್ದಾರೆ.
©2024 Book Brahma Private Limited.