ಕಾಫ್ಕಾನೊಂದಿಗೆ ಸಂವಾದ

Author : ಆನಂದ ಝಂಜರವಾಡ

Pages 140

₹ 86.00




Year of Publication: 2023
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

ʼಕಾಫ್ಕಾನೊಂದಿಗೆ ಸಂವಾದʼ ಆನಂದ ಝಂಜರವಾಡ ಅವರ ಅನುವಾದಿತ ಕೃತಿಯಾಗಿದೆ. ಕಾಫ್ಕಾನ ಕುರಿತೂ ಕೂಡ ತುಂಬ ಸೂಕ್ಷ್ಮವಾದ ಬರಹ ಮೊದಲ ಸಂಪುಟದಲ್ಲಿಯೇ ಇದೆ. ಈ ಲೇಖನವನ್ನು ಓದಿದಾಗ ನನಗೆ ಕಾವ್ಯಾ ಕುರಿತು ಇನ್ನು ಹೆಚ್ಚು ಒಳನೋಟಗಳು ಸಿಕ್ಕವು, ಕಾಫ್ಕಾನ ಕುರಿತ ಲೇಖನದಲ್ಲಿ ಅಚ್ಯುತ ಗೋಡಬೋಲೆ,ಕಾಫ್ಕಾನ ತೀರ ಖಾಸಗಿಯಾದ ಬದುಕಿನ ಅನೇಕ ಸೂಕ್ಷ್ಮಗಳನ್ನು ಬಿಚ್ಚಿ ಇಟ್ಟಿದ್ದಾರೆ. ಜೊತೆಗೆ ಆತನ ಸ್ವಭಾವದ ವೈಚಿತ್ರ್ಯಗಳಂತೆ ಕಾಣುವ ವಿಶಿಷ್ಟತೆಗಳನ್ನೂ ಬಿಡಿಸಿದ್ದಾರೆ.ಕಾಫ್ಕಾನ ಜೊತೆ ವಿಚಿತ್ರವಾದ ಸಂಬಂಧಗಳನ್ನು ಹೊಂದಿದ್ದ ಅನೇಕ ಹೆಣ್ಣುಗಳಲ್ಲಿ ಮಿಲೆನಾ ಅನ್ನುವವಳೂ ಇದ್ದಳು. ಅವಳ ಹಾಗೂ ಕಾಫ್ಕಾನ ನಡುವಿನ ಸಖ್ಯದ ಆಖ್ಯಾನವನ್ನು ನಾವು ಗಮನಿಸುವಂತಿದೆ. ಈ ಮಿಲೆನಾ, ಕಾಫ್ಕಾನ ಒಂದು ಪತ್ರಕ್ಕೆ ಉತ್ತರಿಸುವಾಗ, ಕಾವ್ಯಾ ತನಗೆ ಹೇಗೆ ಕಾಣತಾನೆ ಅನ್ನೋದನ್ನ ವಿವರಿಸ್ತಾಳೆ. “ಆತ ಸದಾ ಕಾಲವು ಕಿಟಕಿಯ ಕಬ್ಬಿಣದ ರಾಡ್‌ಗಳಿಗೆ ಗದ್ದ ಊರಿ ಆಚೆಗಿನ ಆಕಾಶವನ್ನೇ ದಿಟ್ಟಿಸುತ್ತಿದ್ದ. ಆತ ಎಂದೂ ಬಾಗಿಲು ತೆರೆದು ಪೂರ್ತಿ ಹೊರಬಂದು ನೆಲವನ್ನು ನೋಡಲಿಲ್ಲ. ಕಿಟಕಿಯಲ್ಲಿಯೂ ನೆಲವು ಕಾಣುತ್ತದಾದರೂ, ಅದು ಬಾಗಿಲು ತೆರೆದಾಗ ಕಾಣುವಷ್ಟು ಮುಕ್ತವಾಗಿರುವದಿಲ್ಲ." ಇದು ಮಿಲೆನಾ ಹೇಳುವ ಮಾತು. ಈ ಮಾತು ಕಾಫ್ಕಾನನ್ನು ಓದುವಾಗ ಉಪಯುಕ್ತ ಎನ್ನಿಸುವ ಒಂದು ಬಗೆಯ ಟಿಪ್ಪಣಿಯೂ ಆಗಿದೆ. ಲೇಖಕನನ್ನು ಕುರಿತು ಎಷ್ಟೇ ಅರಿತರೂ, ಅವನ ಕೃತಿಗಳನ್ನು ಓದುವಾಗ ಆ ಅರಿವುಗಳನ್ನು ಮರೆಯಬೇಕು ಎಂದು ಭಾವಿಸುವ ಒಂದು ಓದು-ಸಂಸ್ಕೃತಿಯೂ ಇದೆ. ನನಗೆ ಕೃತಿಕಾರನ ಬಗೆಗಿನ ಅರಿವು ಅವನ ಕೃತಿ- ಪ್ರವೇಶಕ್ಕೆ ಅನರ್ಥಕಾರಿ ಎಂದು ಎಂದೂ ಅನ್ನಿಸಿಲ್ಲ.

About the Author

ಆನಂದ ಝಂಜರವಾಡ
(25 June 1952)

ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ?  ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ. ...

READ MORE

Related Books