ಜಗತ್ತಿನ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ವೋಲೆ ಸೋಯಿಂಕಾರ ಆಯ್ದ ಬರಹಗಳ ಸಂಗ್ರಹ ‘ವೋಲೆ ಸೋಯಿಂಕಾ ವಾಚಿಕೆ’. ಈ ಕೃತಿಯನ್ನು ಕನ್ನಡದ ಖ್ಯಾತ ಕವಿ, ಅನುವಾದಕಿ ಜ.ನಾ. ತೇಜಶ್ರೀ ಅನುವಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಸೋಯಿಂಕಾರ ಭಾಷೆ ಮತ್ತು ಚಿಂತನೆಯೊಳಗೆ ಹರಡಿಕೊಂಡಿರುವ ಆಫ್ರಿಕಾದ ಸಾಂಸ್ಕೃತಿಕ ಬೇರುಗಳು ಲೋಕದೆಲ್ಲೆಡೆಗೆ ಚಾಚಿಕೊಳ್ಳುವ ಮಾನವೀಯ ಸತ್ವದವು. ಇವರ ಚಿಂತನೆಯ ಹಿಂದಿರುವ ಕಾಳಜಿಯು ಮನುಷ್ಯ ಕುಲವನ್ನು ಕಾಡುತ್ತಿರುವ ಭಯ, ಕ್ರೌರ್ಯ ಮತ್ತು ದುಷ್ಟತನದ ಸ್ವರೂಪಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಮನುಷ್ಯದ ಹುಡುಕಾಟಗಳು ಸೋಯಿಂಕಾ ಬರಹದ ಕಣಕಣದಲ್ಲೂ ಅಡಗಿದೆ, ತುಂಬಿದೆ. ಇವನ್ನೆಲ್ಲ ಸೋಯಿಂಕಾ ಅಲ್ಲದೆ ಮತ್ತಿನ್ಯಾರೂ ಬರೆಯಲು ಸಾಧ್ಯವಿಲ್ಲವೆನ್ನುವ ಅನನ್ಯತೆಯ ಚೆಲುವನ್ನು ಓದಿಯೇ ಅನುಭವಿಸಬೇಕು ಎಂದಿದ್ದಾರೆ ಕವಿ, ಅನುವಾದಕಿ ಜ.ನಾ. ತೇಜಶ್ರೀ. ಕೃತಿಯಲ್ಲಿ 'ನಿಷ್ಠುರತೆಯೊಳಗಿಂದ ಹೊಮ್ಮುವ ಲೋಕದ ಅರಿವು', 'ಕವಿತೆಗಳು', 'ಭಾಷಣ', 'ಸಂದರ್ಶನ', 'ಪ್ರಸ್ತಾವನೆ', 'ಮೂಲ ಲೇಖಕನ ಟಿಪ್ಪಣಿ', 'ನಾಟಕ', 'ಪದಕೋಶ' ಸಂಕಲನಗೊಂಡಿವೆ.
©2024 Book Brahma Private Limited.