‘ಇಕಿಗಾಯ್’ (ದೀರ್ಘ ಹಾಗೂ ಸಂತಸಭರಿತ ಜೀವನಕ್ಕೆ ಜಪಾನಿಯರ ಗುಟ್ಟು) ಕೃತಿಯು ಜೆ. ರಾಮಲಿಂಗೇಗೌಡ ಅವರ ಅನುವಾದಿತ ಕೃತಿ. ಮೂಲ ಲೇಖಕರು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ. ಇಕಿಗಾಯ್ ಕೃತಿಯು ನಮಗೆ ಹಲವಾರು ವಿಚಾರಗಳನ್ನು ವಿವರಿಸುತ್ತದೆ. ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು, ವಯಸ್ಸಾಗದಿರುವುದರ ರಹಸ್ಯವನ್ನು, ದೀರ್ಘ ಮತ್ತು ಸಂತಸಮಯ ಜೀವನ ವೃದ್ದಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು, ಲೋಗೋ ತೆರೆಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು, ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು ಕಾಣುವುದನ್ನು, ದೀರ್ಘ ಆಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು, ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು ದೀರ್ಘಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು ವಿವರಿಸುತ್ತದೆ
©2024 Book Brahma Private Limited.