'ಕೊನೆಯ ಹೀರೋಗಳು' ಪಿ. ಸಾಯಿನಾಥ್ ಅವರ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಪತ್ರಕರ್ತ ಜಿ.ಎನ್. ಮೋಹನ್ ಕನ್ನಡೀಕರಿಸಿದ್ದಾರೆ. ದೆ ಮಾತಿ ಡೆ ಸಬರ್ ‘ಸಾಲಿಹಾನ್’ ಸ್ವಾತಂತ್ರ್ಯ ಹೋರಾಟಗಾರಳಲ್ಲ. ಭಾರತ ಸರ್ಕಾರಕ್ಕಂತೂ ಅಲ್ಲವೇ ಅಲ್ಲ. ಆದರೂ ಕೇವಲ 16 ವರ್ಷದ ಈ ಆದಿವಾಸಿ ತರುಣಿ ಒಡಿಶಾದ ತನ್ನ ಗ್ರಾಮದ ಮೇಲೆ ದಾಳಿ ಮಾಡಿದ ಬ್ರಿಟಿಷ್ ಪೊಲೀಸರ ವಿರುದ್ಧ ಅದ್ಭುತ ಪ್ರತಿದಾಳಿಯನ್ನು ಮುನ್ನಡೆಸಿದಳು. ಈಕೆ ಹಾಗೂ 40 ಇತರ ಬುಡಕಟ್ಟು ಮಹಿಳೆಯರು ಸಶಸ್ತ್ರ ಪೊಲೀಸ್ ಪಡೆಯನ್ನು ಕೇವಲ ಲಾಠಿಗಳಿಂದ ಎದುರಿಸಿ ಗೆದ್ದರು. ಆಕೆ ಜೈಲಿಗೆ ಹೋಗಲಿಲ್ಲ, ಸಂಘಟಿತ ರಾಜಕೀಯದ ಭಾಗವಾಗಿರಲಿಲ್ಲ. ನಾಗರಿಕ ಅಸಹಕಾರ ಅಥವಾ ಕ್ವಿಟ್ ಇಂಡಿಯಾದಂತಹ ಚಳವಳಿಯಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ ಆಕೆಯ ಗ್ರಾಮ ಸಾಲಿಹಾದಲ್ಲಿ ಈಗಲೂ ಆ ಶೌರ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಇದೇ ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಪ್ರತಿರೋಧ ತೋರಿದ 17 ಜನರ ಹೆಸರನ್ನು ನಮೂದಿಸಲಾಗಿದೆ. ಆದರೆ, ಆ ಪಟ್ಟಿಯಲ್ಲಿ ಈಕೆಯ ಹೆಸರೇ ಇಲ್ಲ. ಸಾಲಿಹಾನ್‌ಳಿಗೆ ಭಾರತ ಸರ್ಕಾರ ಎಂದಿಗೂ ಸ್ವಾತ್ರಂತ್ರ್ಯ ಹೋರಾಟಗಾರ್ತಿಯ ಗೌರವವನ್ನು ನೀಡಲಿಲ್ಲ. ಆದರೆ, ಈ ಕೃತಿ ನೀಡಿದೆ ಎಂದು ಸಾಯಿನಾಥ್ ಪಿ ಅವರು ಕೃತಿಯ ಬಗ್ಗೆ ತಿಳಿಸಿದ್ದಾರೆ.
©2025 Book Brahma Private Limited.