'ಅಮೇರಿಕನ್ ನೇಟಿವ್ ನಾಯಕ ಸಿಟ್ಟಿಂಗ್ ಬುಲ್' ಲೇಖಕ ಉದಯಕುಮಾರ ಹಬ್ಬು ಅನುವಾದಿಸಿರುವ ಕೃತಿ. ಕೋಲಂಬಸ್ ಅಮೇರಿಕಾವನ್ನು ಕಂಡು ಹಿಡಿದ ಎನ್ನುತ್ತಾರೆ ಮತ್ತು ಇಲ್ಲಿಗೆ ಬ್ರಿಟನ್ ನಿಂದ ವಲಸೆಬಂದ ಬಿಳಿಯರು ಮೂಲನಿವಾಸಿಗಳಾದ ರೆಡ್ ಇಂಡಿಯನ್ ರ ಭೂಮಿಯನ್ನು ಕಬಳಿಸಲು ಮುಂದಾಗುತ್ತಾರೆ. ಇಲ್ಲಿ ಕೃಷಿ ಮಾಡುತ್ತಾರೆ. ಚಿನ್ನವನ್ನು ಅಗೆದು ತೆಗೆಯಲು ಮೂಲನಿವಾಸಿಗಳನ್ನು ನಾನಾ ರೀತಿಗಳಿಂದ ಶೋಷಣೆ ಮಾಡುತ್ತಾರೆ. ಅವರ ಭೂಮಿಗಳನ್ನಷ್ಟೇ ಅಲ್ಲ ಅವರ ಸಂಸ್ಕೃತಿಯನ್ನೂ ನಾಶಪಡಿಸುತ್ತಾರೆ. ತಮ್ಮ ಭೂಮಿಯನ್ನು ಬಿಡಲೊಪ್ಪದ ಸಿಯೊಕ್ಸ್ ನವರು ಬಿಳಿಯರೊಂದಿಗೆ ಸಂಘರ್ಷಗಳನ್ನು, ಹೋರಾಟಗಳನ್ನು ಮಾಡುತ್ತಾರೆ. ಆದರೆ ಬಿಳಿಯರ ಸೈನ್ಯಬಲದ ಎದುರು ಸೋತುಬಿಡುತ್ತಾರೆ. ಅಷ್ಟೇ ಅಲ್ಲ ಬಿಳಿಯರು ಅಮೇರಿಕಾದ ಮೂಲನಿವಾಸಿಗಳನ್ನು ಕೊಂದು ಸಂಪೂರ್ಣ ನಾಶ ಮಾಡುತ್ತಾರೆ.
ಮೂಲನಿವಾಸಿಗಳಿಗೆ ವಾಸಿಸಲು ರಿಸರ್ವೇಷನ್ ಕಾಡಿಗೆ ಕಳಿಸಿ ಅವರ ಸ್ವಾತಂತ್ರ್ಯವನ್ನು ಹರಣ ಮಾಡುತ್ತಾರೆ. ಸಿಟ್ಟಿಂಗ್ ಬುಲ್ ಮಾತ್ರ ಜೀವನದ ಕೊನೆ ಉಸಿರು ಇರುವತನಕ ತನ್ನ ನಾಡು , ತನ್ನ ನಾಡು, ತನ್ನ ಜನರಿಗಾಗಿ ಬಿಳಿಯರೊಂದಿಗೆ ಹೋರಾಟ ಮಾಡುತ್ತಾನೆ. ಬಿಳಿಯರು ರೆಡ್ ಇಂಡಿಯನ್ನರನ್ನು ಪೊಲೀಸರನ್ನಾಗಿ ನೇಮಿಸಿ ಅವರನ್ನೇ ತಮ್ಮ ಜನರ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತಾರೆ. ಮತ್ತು ಸಿಟ್ಟಿಂಗ್ ಬುಲ್ ನನ್ನು ಸಾಯಿಸುವವರು ಅವನ ಬಂಧುಗಳೆ. ಟಾಮ್ ಎಂಬ ರೆಡ್ ಇಂಡಿಯನ್ ಪೊಲೀಸ್ ಸಿಟ್ಟಿಂಗ್ ಬುಲ್ ನನ್ನು ಕೊಲ್ಲುತ್ತಾರೆ. ಹೀಗೆ ತನ್ನ ಜನರಿಗಾಗಿ ತನ್ನ ಪ್ರಾಣವನ್ನೆ ಬಲಿ ಕೊಟ್ಟ ಸಿಟ್ಟಿಂಗ್ ಬುಲ್ ಅವರ ಕಥನವನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.