`ಕಡಲ ಹಕ್ಕಿ’ ಕೃತಿಯು ಆ್ಯಂಟನ್ ಚೆಕಾಫ್ ಅವರ ಮೂಲ ಕೃತಿಯಾಗಿದ್ದು, ಶ್ರೀನಿವಾಸ ವಿ. ಸುತ್ರಾವೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಚೆಕಾಫ್‌ನ ಸೀಗಲ್ ನಾಟಕ “ಕಡಲ ಹಕ್ಕಿ” ಎನ್ನುವ ಹೆಸರಿನಿಂದ ರಚಿಸಲ್ಪಟ್ಟಿದೆ. ಕ್ರಾಂತಿಪೂರ್ವ ರಷ್ಯಾದ ಜನರ ಬದುಕು ಮಧ್ಯಮವರ್ಗದ ತಳಮಳಗಳ ಮಧ್ಯೆಯೇ ಅರಳುವ ಪ್ರೀತಿಯೊಂದು ಕಮರಿಹೋಗುವ ಕತೆ ಇಲ್ಲಿದ್ದು, ಸುಂದರವಾದ ಕಡಲ ಹಕ್ಕಿಯ ಸಾವು ಸಮಾಗಮವಾಗಬೇಕಾದ ಎರಡು ಮನಸುಗಳ ವಿಮುಖತೆಗೆ ಸಾಂಕೇತಿಕವಾಗಿ ಮೂಡಿಬಂದಿದೆ. ಶ್ರೀನಿವಾಸ ಸುತ್ರಾವೆ ಯವರು ಮೂಲನಾಟಕದ ಪರಿಸರ ಭಿನ್ನವಾಗಿದ್ದರೂ ಭಾಷೆಯ ವಿವಿಧತೆಯಿಂದ ಆಪ್ತವಾದ ರೀತಿಯಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ.
(ಹೊಸತು, ಸೆಪ್ಟೆಂಬರ್, 2014, ಪುಸ್ತಕದ ಪರಿಚಯ)
ವಿಶ್ವವಿಖ್ಯಾತ ನಾಟಕಕಾರ, ಕತೆಗಾರ ಆ್ಯಂಟನ್ ಚೆಕಾಫ್ ಅವರ ಎಲ್ಲ ನಾಟಕಗಳೂ ಕತೆಗಳೂ ವಿಶ್ವದ ಬಹುತೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ರಷ್ಯಾದ ಕ್ರಾಂತಿಪೂರ್ವ ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳನ್ನು ಸಶಕ್ತವಾಗಿ ತಮ್ಮ ನಾಟಕಗಳ ವಸ್ತುವನ್ನಾಗಿಸಿಕೊಂಡವರು ಚೆಕಾಫ್. ದಿ ಚೆರಿಕಡಲ ಹಕ್ಕಿ ಆರ್ಚರ್ಡ್ ಎಂಬ ಚೆಕಾಫ್‌ರ ನಾಟಕ ವಿಶ್ವದ ರಂಗಭೂಮಿಗೆ ಸಂದ ವಿಶೇಷ ಕೃತಿ, ಚೆಕಾಫ್ ಅವರ ಎಲ್ಲ ನಾಟಕಗಳೂ ಕನ್ನಡ ಭಾಷೆಗೆ ಅನುವಾದ ಗೊಂಡಿವೆ. ಬಹುತೇಕ ರಂಗ ಪ್ರಯೋಗಕಂಡಿವೆ. ಕನ್ನಡದಲ್ಲಿ ಬೈಕ್ಸ್ ಮತ್ತು ಚೆಕಾಫ್ ನಾಟಕಗಳು ಬೇರೆ ಬೇರೆ ಲೇಖಕರಿಂದಲೂ ಅನುವಾದಗೊಂಡಿವೆ. ಪ್ರತಿಯೊಬ್ಬ ಅನುವಾದಕರೂ ತಮ್ಮ ವಿಭಿನ್ನ ಗ್ರಹಿಕೆ ಮತ್ತು ಭಾಷಾಶೈಲಿಯ ಮೂಲಕ ಈ ಕೃತಿಗಳ ಆಶಯಗಳನ್ನು ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಕನ್ನಡಕ್ಕೆ ತಂದುಕೊಟ್ಟಿದ್ದಾರೆ.
ಹಲವಾರು ಇಂಗ್ಲಿಷ್ ನಾಟಕಗಳನ್ನು, ಬೇರೆ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಗೊಂಡ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ ಪ್ರಮುಖರಲ್ಲಿ ಪ್ರೊ.ಶ್ರೀನಿವಾಸ್ ಸುತ್ರಾವೆ ಒಬ್ಬರು. ಅವರು ಚೆಕಾಫ್‌ನ ಸೀಗಲ್ ನಾಟಕವನ್ನು “ಕಡಲ ಹಕ್ಕಿ ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ. ಕ್ರಾಂತಿಪೂರ್ವ ರಷ್ಯಾದ ಜನರ ಬದುಕು ಮಧ್ಯಮವರ್ಗದ ತಳಮಳಗಳ ಮಧ್ಯೆಯೇ ಅರಳುವ ಪ್ರೀತಿಯೊಂದು ಕಮರಿಹೋಗುವ ಕತೆ *ಕಡಲ ಹಕ್ಕಿ ಯದು. ಸುಂದರವಾದ ಕಡಲ ಹಕ್ಕಿಯ ಸಾವು ಸಮಾಗಮವಾಗಬೇಕಾದ ಎರಡು ಮನಸುಗಳ ವಿಮುಖತೆಗೆ ಸಾಂಕೇತಿಕವಾಗಿ ಮೂಡಿಬಂದಿದೆ. ಶ್ರೀನಿವಾಸ ಸುತ್ರಾವೆ ಯವರು ಮೂಲನಾಟಕದ ಪರಿಸರ ಭಿನ್ನವಾಗಿದ್ದರೂ ಭಾಷೆಯ ವಿವಿಧತೆಯಿಂದ ಆಪ್ತವಾದ ರೀತಿಯಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ.
©2025 Book Brahma Private Limited.