ʻಗೆದ್ದೇ ಬಿಟ್ಟೆʼ ಎಂಬ ಕೃತಿಯಲ್ಲಿ ತನಗೆ ಅರಿವಿಲ್ಲದೆಯೇ ತೋರುವ ಸಿಡುಕುತನ, ದುಡುಕುತನದ ಮನೋಭಾವದಿಂದಾಗಿ ಸ್ನೇಹಿತರಿಂದ ದೂರುವುಳಿಯುವಂತಾಗಿ ಪರಿತಪಿಸುವ, ಕೊನೆಗೆ ಅಂಗವೈಕಲ್ಯವನ್ನೂ ಮೆಟ್ಟಿನಿಂತು, ವಿಶೇಷಚೇತನರ ಈಜು ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ಮೆರೆದ ಬಾಲಕಿಯೊಬ್ಬಳ ಕಥೆಯು ವಾಸ್ತವದೊಂದಿಗೆ ಕಲ್ಪನೆಯನ್ನು ಬೆಸುಗೆ ಹಾಕಿಸಿಕೊಂಡು ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. ಈ ಕಥೆಯು ಮನರಂಜನೆ, ಸ್ಫೂರ್ತಿ ನೀಡುವ ಜತೆಗೆ ಕಥೆಯೊಳಗೆ ನಮ್ಮನ್ನು ನಾವು ಕಂಡುಕೊಳ್ಳುವಂತೆ ಪ್ರಚೋದಿಸುತ್ತದೆ.
ಸಂತೋಷ ತಾಮ್ರಪರ್ಣಿ ಅವರು ಮೂಲತಃ ಧಾರವಾಡದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಓದು, ನಾಟಕ, ಸಿನೆಮಾ ಮತ್ತು ಬರವಣಿಗೆ ಇವರ ಇಷ್ಟದ ಕ್ಷೇತ್ರಗಳು. ಅವರ ಸಾಕಷ್ಟು ಲೇಖನಗಳು ಮತ್ತು ಅನುವಾದಗಳು ವಿವಿಧೆಡೆ ಪ್ರಕಟವಾಗಿವೆ. ಸಣ್ಣ ಕಥೆ ಮತ್ತು ಲಲಿತ ಪ್ರಬಂಧಗಳು ಆಡಿಯೋ ರೂಪದಲ್ಲಿ ಲಭ್ಯ ಇವೆ. ಇವರ ಅನುವಾದಿತ ಲೇಖನಗಳನ್ನು ಒಳಗೊಂಡ 'ಈ ಪರಿಯ ಸೊಬಗು' (ಸಂ: ಜಿ ಎನ್ ಮೋಹನ್) ಪುಸ್ತಕ ಸಹ ಹೊರ ಬಂದಿದೆ. ಕೃತಿಗಳು: ಗೆದ್ದೇ ಬಿಟ್ಟೆ! ...
READ MORE