ಒಂದು ಪುಟದ ಕಥೆ : ವಿ. ಸ. ಖಾಂಡೇಕರ ಆತ್ಮಕಥನ

Author : ಗುರುಲಿಂಗ ಕಾಪಸೆ

Pages 392

₹ 405.00

Buy Now


Year of Publication: 2022
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಷ್‌ ರೋಡ್‌, ಹೊಸಯೆಲ್ಲಪುರ ,ಧಾರವಾಡ 580001
Phone: 9845447002

Synopsys

ಒಂದು ಪುಟದ ಕಥೆ : ವಿ.ಸ. ಖಾಂಡೇಕರ ಆತ್ಮಕಥನವು ಖಾಂಡೇಕರ್ ವಿ ಎಸ್ ಅವರ ಕೃತಿಯಾಗಿದೆ. ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಗುರುಲಿಂಗ ಕಾಪಸೆ  ಅನುವಾದಿಸಿದ್ದಾರೆ. ಒಂದು ತಲೆಮಾರಿನ ಕೊಂಕಣದ ಜನಜೀವನದ ಸ್ಥಿತಿ-ಗತಿಗಳನ್ನು ಚಿತ್ರಿಸುತ್ತಲೇ ತಮ್ಮ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು ಅಲ್ಲಲ್ಲಿ ಕಣ್ಣುಹನಿಗೂಡುವಂತೆ ಖಾಂಡೇಕರರು ವಿವರಿಸಿದ್ದಾರೆ. ಅವರು ಆಗಿನ ಜನಾಂಗದಲ್ಲಿರುವ ವರ್ಗ, ವರ್ಣ ವೈಷಮ್ಯ, ಲಿಂಗತಾರತಮ್ಯ ಇತ್ಯಾದಿಗಳನ್ನು ಗಮನಿಸಿದ್ದಾರೆ. ಆತ್ಮಕಥೆ ವಾಸ್ತವತೆಯ ನೆಲೆಗಟ್ಟಿನ ಮೇಲೆ ನಿಂತಿದ್ದರೂ ಕವಿ ಹೃದಯ, ಕಾದಂಬರಿಕಾರನ ಕಥನ ಕೌಶಲ, ಸಮಾಜ ಸುಧಾರಕನ ಚಿಂತನಶೀಲತೆ-ಇವು ಬರವಣಿಗೆಗೆ ಪೋಷಕ ಸಾಮಗ್ರಿಯಾಗಿ ನಿಂತಿವೆ. ಒಟ್ಟಂದದಲ್ಲಿ ಆತ್ಮಕಥನ ಸಾಹಿತ್ಯದಲ್ಲಿ ಇದೊಂದು ಅಪರೂಪದ ಕೃತಿ.

About the Author

ಗುರುಲಿಂಗ ಕಾಪಸೆ
(02 April 1928)

ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.  ಕೃತಿಗಳು: ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಪ್ರವಾಸಕಥನ: ಶಾಲ್ಮಲೆಯಿಂದ ಗೋದಾವರಿಯವರೆಗೆ ಹಾಗೂ ಮಕ್ಕಳ ಸಾಹಿತ್ಯ: ಕವಿ ರವಿಂದ್ರರು, ಶಿ.ಶಿ.ಬಸವನಾಳ ಮತ್ತು ವಿಮರ್ಶೆ: ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ. ಸಂಪಾದಿತ ಕೃತಿಗಳು: ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ...

READ MORE

Related Books