ಯವನವಿಜೇತ ಚಂದ್ರಗುಪ್ತ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಪಂಡಿತ್ ದೀನದಯಾಳ ಉಪಧ್ಯಾಯ ಅವರು ರಚಿಸಿದ್ದು, ಇದರ ಕನ್ನಡನುವಾದವನ್ನು ಲೇಖಕ ಶಿವರಾಮು ಅವರು ಮಾಡಿದ್ದಾರೆ. ಈ ಕೃತಿಯಲ್ಲಿ 2,400 ವರ್ಷಗಳ ಹಿಂದೆ ಚಂದ್ರಗುಪ್ತ ಮತ್ತು ಚಾಣಕ್ಯರು ಒಗ್ಗೂಡಿ ನಡೆಸಿದ ಪ್ರಯತ್ನಗಳಿಂದ ಸಮಾಜದ ರಚನಾತ್ಮಕ ಶಕ್ತಿ ಎಚ್ಚೆತ್ತಿತು. ಅಜೇಯನೆನಿಸಿಕೊಂಡಿದ್ದ ಪಶ್ಚಿಮದ ವೀರ ಅಲಿಕ ಸುಂದರನನ್ನು ಭಾರತದಿಂದ ಹೊರಗಟ್ಟಿದುದಷ್ಟೇ ಅಲ್ಲ, ಒಂದು ಭವ್ಯ ಸಾಮ್ರಾಜ್ಯದ ಕನಸು ಅವರಲ್ಲಿ ಮೊಳಕೆಯೊಡೆಯಿತು. ಚಂದ್ರಗುಪ್ತ ಮತ್ತು ಚಾಣಕ್ಯರು ತಮ್ಮ ಸಾಮರ್ಥ್ಯದಿಂದ ಭಾರತದ ಸಣ್ಣಪುಟ್ಟ ರಾಜ್ಯಗಳೆಲ್ಲವನ್ನೂ ವಶಪಡಿಸಿಕೊಂಡರು. ವಿದೇಶಿ ಯವನರೂ ಸಹ ಮುಕ್ತಕಂಠದಿಂದ ಹೊಗಳುವಷ್ಟು ಸುಸಜ್ಜಿತ ಸಾಮರ್ಥ್ಯ ಮತ್ತು ದಕ್ಷ ಆಡಳಿತವನ್ನು ನಡೆಸಿದರು. ಅವರ ರಾಷ್ಟ್ರೀಯ ಪ್ರಯತ್ನಗಳಿಂದಾಗಿ ಭಾರತದಲ್ಲಿ ಅಗಾಧ ಶಕ್ತಿ ಸಂಚಯವಾಯಿತು. ಇಂಥ ಪ್ರಚಂಡ ರಾಷ್ಟ್ರಶಕ್ತಿಯನ್ನು ಕಟ್ಟಿದ ಮಹಾಪುರುಷ, ಜಗತ್ತಿನೆದುರು ಕಂಗೊಳಿಸಿದ ಚಕ್ರಾಧಿಪತಿ ಚಂದ್ರಗುಪ್ತ ಮೌರ್ಯನ ಪುಣ್ಯಚರಿತ್ರೆಯನ್ನು ನೆನಪಿಸುವ ಮಹದ್ಗ್ರಂಥ ‘ಯವನವಿಜೇತ ಚಂದ್ರಗುಪ್ತ’ ಎಂದು ಚಂದ್ರಗುಪತ್ನ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.