‘ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ದೇವಿದಯಾಳ ಅವರ ಕೃತಿಯ ಕನ್ನಡಾನುವಾದ. ಲೇಖಕ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಇದಕ್ಕೆ ಶಾಂತಿಸ್ವರೂಪ್ ಬೌದ್ಧ ಅವರ ಬೆನ್ನುಡಿ ಬರಹವಿದೆ; ಸರ್ಕಾರಿ ನೌಕರಿಯಿಂದ ನಿವೃತ್ತಿಯಾದಂತೆಯೇ ದೇವಿದಯಾಳರ ಸಾಂಘಿಕ ಕಾರ್ಯಕಲಾಪಗಳು ಸಹ ಅದರ ಅಕ್ಕಪಕ್ಕ ಹತ್ತಿರತ್ತಿರ ನಡೆದವು. ವೃದ್ಧಾಪ್ಯ, ಶಾರೀರಿಕ, ಮಾನಸಿಕ ಸಮಸ್ಯೆಗಳು ಆತನನ್ನು ಮನೆಗೆ ಸೀಮಿತ ಮಾಡಿದವು ಆದರಿಂದಾಗಿ ಆತನ ಅಂದಂದಿನ ಸಮಾಚಾರ ನನಗೆ ಎಟಕುತ್ತಿರಲಿಲ್ಲ ಕೊನೆಗೆ ಆತ ಯಾವಾಗ ಸತ್ತನೆಂಬ ವರ್ತಮಾನವೂ ನನಗೆ ಅಳಿಯಲಿಲ್ಲ. ದೇವಿದಯಾಳ್ ರ ಮರಣಾನಂತರ ಸುಪ್ರೀಂಕೋರ್ಟ್ ಅಡ್ವಕೇಟ್ ಭಗವಾನ್‌ದಾಸರು ದೇವಿದಯಾಳರ ಪುಸ್ತಕವನ್ನು ಪ್ರಕಾಶನ ಮಾಡಲು ತೆಗೆದುಕೊಂಡದ್ದಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ವಾಸ್ತವವಾಗಿ ದೇವಿದಯಾಳರು ಬಾಬಾಸಾಹೇಬರ ಬಾಳಚರಿತ್ಸೆಗೆ ಸಂಬಂಧಿಸಿದ ಒಂದಷ್ಟು ವಾಸ್ತವ ಸಂಗತಿಗಳನ್ನು ಕಣ್ಮರೆಯಾಗದಂತೆ ದಾಖಲಿಸಿ ನಮಗೆ ದೊರಕುವಂತೆ ಮಾಡಿದ್ದಾರೆ. ಈ ಕಾರಣಕ್ಕಾಗಿ ನಾವೆಲ್ಲರೂ ಆತನನ್ನು ಮನಸ್ಪೂರ್ವಕವಾಗಿ ಅಭಿನಂದಿಸಬೇಕು ಹಾಗೇನಾದರೂ ಕೃತ ದಾಖಲಿಸದೇ ಹೋಗಿದ್ದರೆ ಬಾಬಾಸಾಹೇಬರ ಬದುಕಿಗೆ ಸಂಬಂದಿಸಿದ ಕೆಲವು ಕರೋರ ವಾಸ್ತವಗಳು ನಮಗೆ ತಿಳಿಯುತ್ತಲೇ ಇರಲಿಲ್ಲ ಗಾತ್ರದ ದೃಷ್ಟಿಯಿಂದ ನೋಡಿದರೆ ಈ ಪುಸ್ತಕ ದೇವಿದಯಾಳ್ ಹೇಳುವಷ್ಟು ದೊಡ್ಡ ಪುಸ್ತಕ ಅಲ್ಲದಿರಬಹುದು ಎಂಬ ಸಂದೇಹ ಓದುಗರಿಗೆ ಬರುತ್ತದೆ.
ಒಂದು ವೇಳೆ ಆತ ಕೊಟ್ಟ ಹಸ್ತಪ್ರತಿಯಲ್ಲಿ ಒಂದಷ್ಟು ಭಾಗ ದೊರೆಯಲಿಲ್ಲವೇನೋ ಎಂಬ ಅನುಮಾನ ಕೂಡ ಬರುತ್ತದೆ. ಉಳಿದಂತೆ ಏನೇ ಇದ್ದರೂ ಈ ಪುಸ್ತಕದಲ್ಲಿ ಆತ ದಾಖಲಿಸಿದ ವಿಚಾರಗಳು ಅತ್ಯಂತ ಬೆಲೆಯುಳ್ಳವು ಮೇಲಾಗಿ ಅಧಿಕಾರಯುತವಾದ ವಿಚಾರಗಳು ಈ ಪುಸ್ತಕದ ದೊಡ್ಡತನವೇನೆಂದರೆ, ಇಂಥ ಸಮಾಚಾರಗಳನ್ನು ನೀಡಿರುವ ಪುಸ್ತಕ ಇದೊಂದೇ, ಬಾಬಾಸಾಹೇಬರ ದೈನಂದಿನ ಬದುಕನ್ನು ನಮಗೆ ತೋರಿಸುತ್ತದೆಯಲ್ಲದೆ ಆತನ ಉನ್ನತವಾದ ಹವ್ಯಾಸ, ರೂಢಿಗಳನ್ನೂ ಈ ಪುಸ್ತಕ ನಮಗೆ ತೆರೆದಿಡುತ್ತದೆ ಎಂದಿದ್ದಾರೆ.
©2024 Book Brahma Private Limited.