ಲೇಖಕಿ ಸಂಯುಕ್ತಾ ಪುಲಿಗಲ್ ಅವರ ’ ನ್ಯಾಂಡೊ ಪರಾಡೊ ಪರ್ವತದಲ್ಲಿ ಪವಾಡ’ ಕೃತಿಯು ಅನುಭವ ಕಥನವಾಗಿದೆ. ಇದೊಂದು ಅನುವಾದಿತ ಕೃತಿಯಾಗಿದ್ದು, ನ್ಯಾಂಡೊ ಪೆರಾಡೊ ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ಕಳೆದ 72 ದಿನಗಳ ರೋಚಕ ಕಥಾನಕವಾಗಿದೆ. ಅತ್ಯಂತ ಸರಳವಾದ ನಿರೂಪಣೆಯೊಂದಿಗೆ ಈ ಕಥಾನಕವು ಬದುಕಿನಾಳದ ಸತ್ಯಗಳನ್ನು ಶೋಧಿಸುವ ಸಾಧನವಾಗಿ ಕಂಡುಬರುತ್ತದೆ. ತನ್ನಿಂದ ತನ್ನದೆಲ್ಲವನ್ನೂ ಕಸಿದುಕೊಂಡ ಬದುಕನ್ನು ಹಿಂದೊಮ್ಮೆ ದ್ವೇಷಿಸಿದ್ದ ವ್ಯಕ್ತಿಯೊಬ್ಬ ಇಂದು ಅದೇ ಬದುಕಿನತ್ತ ಅಗಾಧ ಪ್ರೇಮವನ್ನು ಬೆಳೆಸಿಕೊಂಡದ್ದು, ಪ್ರೀತಿ-ಪ್ರೇಮಗಳಿಂದಲೇ ಬದುಕನ್ನು ಆಪ್ತವಾಗಿಸಿಕೊಂಡದ್ದರ ಕಥೆಯು ನನ್ನ ಬದುಕಿನ ಹುಡುಕಾಟಕ್ಕೆ ಹತ್ತಿರವೆನಿಸಿತ್ತು ಎನ್ನುತ್ತಾರೆ ಲೇಖಕಿ.
ಅತ್ಯಂತ ಪ್ರಾಮಾಣಿಕವಾಗಿ ನಡೆದ ಘಟನೆಯ ವಿವರಗಳನ್ನು ನೀಡುತ್ತಲೇ, ನ್ಯಾಂಡೊ ಪರಾಡೊ ಅವರು ಬದುಕಿನ ಪಾಠಗಳನ್ನು, ಆ ಪಾಠಗಳಿಂದ ಅವರು ಅನುಭವಿಸಿ ಅರಿತ ಅಧ್ಯಾತ್ಮಿಕ ಹೊಳಹುಗಳನ್ನು ಸರಳವಾಗಿ ನಮಗೆ ತಿಳಿಸುತ್ತಾ ಹೋಗುತ್ತಾರೆ. ಭಯ, ಆತಂಕ, ದುಃಖಗಳಿಂದ ಪ್ರಾರಂಭವಾಗುವ ಕಥೆ ಬೆಳೆಯುತ್ತಾ ಹೋದಂತೆ ಸುಖ, ಶಾಂತಿ, ನೆಮ್ಮದಿ, ಪ್ರೀತಿಗಳ ಕೇಂದ್ರವಾಗಿ ಮಾರ್ಪಡುತ್ತಾ ಜೊತೆಗೆ ನಮ್ಮನ್ನೂ ರೂಪಾಂತರಗೊಳಿಸುತ್ತದೆ.
©2024 Book Brahma Private Limited.