‘ಋಗ್ವೇದ ಸಂಹಿತಾ ಭಾಗ-4’ ಕೃತಿಯು ಹೆಚ್. ಪಿ ವೆಂಕಟರಾವ್ ಶರಣ್ಮಾ ಅವರ ಅನುವಾದಿತ ಕೃತಿಯಾಗಿದೆ. ಪ್ರಥಮಾಷ್ಟಕದಲ್ಲಿ ಮೂರನೇ ಅಧ್ಯಾಯವಾಗಿರುವ ಈ ಕೃತಿಯು ಪ್ರಥಮ ಮಂಡಲದ ಸೂಕ್ತಗಳು 33-46 ಅನ್ನು ಒಳಗೊಂಡಿದೆ. ಹತ್ತು ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿಯು ಪ್ರತಿಯೊಂದು ಅಧ್ಯಾಯದಲ್ಲಿಯೂ ಮಂಡಲದ ಋಷಿ ಹಾಗೂ ಸೂಕ್ತದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಎಂಟನೆಯ ಮಂಡಲವೆಲ್ಲಾ ಒಂದೇ ವಂಶದವರ ಕೃತಿಯಲ್ಲ ಎಂಬುದಾಗಿ ಪಾಶ್ಚಾತ್ಯ ವಿದ್ವಾಂಸರ ಅಭಿಪ್ರಾಯವಾಗಿದೆ ಎನ್ನುತ್ತದೆ ಈ ಕೃತಿ. ಆಶ್ವಲಾಯನರ ಅಭಿಪ್ರಾಯದಲ್ಲಿ ಈ ಮಂಡಲವೆಲ್ಲವೂ ಕಾಣ್ವ ಸಂತತಿಯವರು ಎಂದು ತಿಳಿಯಬರುತ್ತದೆ. ಈ ಎರಡು ಅಭಿಪ್ರಾಯಗಳಿಗೂ ಸರಿಯಾದ ಕಾರಣವೇನೋ ಇದೆ. ಆಶ್ವಲಾಯನರು ಈ ಮಂಡಲಕಾರನನ್ನು ಪ್ರಗಾಥ್ರರೆಂದೇ ಕರೆಯುತ್ತಾರೆ. ಈ ಮಂಡಲದ ಒಟ್ಟು 103 ಸೂಕ್ತಗಳಲ್ಲಿ 11 ವಾಲಖಿಲ್ಯ ಸೂಕ್ತಗಳು ಉಳಿದ 50 ಇತರ ಸೂಕ್ತಗಳೂ ಸಹ ಕಾಣ್ವ ಸೂಕ್ತಗಳು. ಆದುರಿಂದ ಒಟ್ಟಿನಲ್ಲಿ ಈ ಮಂಡಲವನ್ನು ಕಾಣ್ವಮಂಡಲವೆಂದು ಕರೆಯಬಹುದು ಎನ್ನುತ್ತದೆ ಇಲ್ಲಿನ ವಿಚಾರಗಳು. ಪ್ರಗಾಥರೇ ಕಾಣ್ವವಂಶದವರೂ, ಪ್ರಥಮ ಸೂಕ್ತದ ಕರ್ತರೂ ಆಗಿರುವುದರಿಂದ ಅಶ್ವಲಾಯನರು ಎಲ್ಲರನ್ನೂ ಒಟ್ಟಿಗೆ ಪ್ರಗಾರ್ಥರೆಂದು ಕರೆದಿರುವುದು ಸಹಜವಾಗಿದೆ ಎನ್ನುವುದನ್ನು ಈ ಕೃತಿಯು ಕಟ್ಟಿಕೊಡುತ್ತದೆ. .
©2024 Book Brahma Private Limited.