ಶೇಕ್ ಫರೀದ್- ಪಂಜಾಬೀ ಸೂಫಿ ಕವಿ ಶೇಕ್ ಫರೀದ್ ಕುರಿತಾದ ಜೆ.ಎಸ್.ಗ್ರೇವಾಲ್ ಅವರ ಕೃತಿಯನ್ನು ಖ್ಯಾತ ಸಾಹಿತಿ, ಮತ್ತು ವಿಮರ್ಶಕರಾದ ಡಾ.ಡಿ.ಆರ್.ನಾಗರಾಜ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಂಜಾಬೀ ಸೂಫಿ ಕವಿ ಶೇಕ್ ಫರೀದ್ ಭಾರತದ ಇಸ್ಲಾಮಿಕ್ ಸೂಫೀ ಪರಂಪರೆಯ ಗಣ್ಯ ಋಷಿಗಳಲ್ಲಿ ಒಬ್ಬರು, ಅಥವಾ ಭಾರತೀಯ ಇಸ್ಲಾಮಿಕ್ ಋಷಿಗಳ ಪೈಕಿ ಆದಿ ಪ್ರಥಮರಲ್ಲೊಬ್ಬರು ಎನ್ನಬಹುದು. ಅಕ್ಷರ ಪ್ರಕಾಶನದ ಗುರಿಗಳಲ್ಲೊಂದು ಭಾರತೀಯ ಸಂಸ್ಕೃತಿಯ ಬಹುಮುಖೀ ವೈವಿಧ್ಯವನ್ನು ಶೋಧಿಸುವುದು. ಸಿಖ್ಖರ ಪವಿತ್ರ ಗ್ರಂಥ ಗ್ರಂಥಸಾಹೀಬ್ ನ ಒಂದುಭಾಗ ಶೇಕ್ ಫರೀದ್ ಎಂದು ತಿಳಿದರೆ ಆತನ ಮಹತ್ವ ತಿಳಿಯುತ್ತದೆ. ಭಾರತದ ಗಣ್ಯ ಇತಿಹಾಸಕಾರರಲ್ಲಿ ಒಬ್ಬರಾದ ಪ್ರೊ.ಜೆ.ಎಸ್.ಗ್ರೇವಾಲ್ ರ ಕೃತಿ ಅಚ್ಚುಕಟ್ಟಾಗಿ ಕವಿ ಶೇಕ್ ಫರೀದನನ್ನು ಪರಿಚಯಿಸುತ್ತದೆ. ಆ ಕೃತ್ತಿಯನ್ನು ಅಷ್ಟೇ ಅಚ್ಚುಕಟ್ಟಾಗಿ ಡಿ.ಆರ್.ನಾಗರಾಜ್ ಕನ್ನಡೀಕರಿಸಿದ್ದಾರೆ.
©2024 Book Brahma Private Limited.