ಕೊನೆಯ ಬಿಳಿ ಬೇಟೆಗಾರ

Author : ಎಲ್.ಜಿ. ಮೀರಾ

Pages 383

₹ 395.00




Year of Publication: 2023
Published by: ಆಕೃತಿ ಪುಸ್ತಕ
Address: 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560010
Phone: 098866 94580, 080-2340 9479

Synopsys

ವನ್ಯ ಸಾಹಿತ್ಯದಲ್ಲಿ ಹೆಸರಾಂತ ಬೇಟೆಗಾರರಾಗಿದ್ದ ಕೆನ್ನೆತ್ ಅಂಡರ್ಸನ್‌ರವರ ಪುತ್ರನೇ ಡೊನಾಲ್ಡ್ ಆಂಡರ್ಸನ್ (1934-2014). ಬೇಟೆಯ ಕೌಶಲ್ಯದಲ್ಲಿ, ವನ್ಯಜೀವಿಗಳ ವಿನಾಶದಲ್ಲಿ ತಂದೆಯನ್ನೂ ಮೀರಿದ ಮಗ ಅವನ ಕೊನೆಗಾಲದಲ್ಲಿ ಆಸರೆ ಕೊಟ್ಟ ಜೋಷುವಾ ಮ್ಯಾಥ್ಯೂ, ಡೊನಾಲ್ಡ್ ಆಂಡರ್ಸನ್ ಹೇಳಿದ ಅಪಾರ ವನ್ಯ ಅನುಭವಗಳನ್ನೂ ಅವನ ರಸಿಕ ಜೀವಿತದ ರಂಜಿಕ ಘಟನೆಗಳನ್ನೂ ಇಂಗ್ಲಿಷ್‌ನಲ್ಲಿ ದಾಖಲಿಸಿ ಓದುಗರಿಗೆ ಈಗಾಗಲೇ ನೀಡಿದ್ದಾರೆ. ಈಗ ಖ್ಯಾತ ಲೇಖಕಿ ಎಲ್ .ಜಿ ಮೀರಾ ಅವರು ಆ ಇಂಗ್ಲಿಷ್ ಕಥನಕ್ಕೆ ಇನ್ನಷ್ಟು ಮೆರುಗು ನೀಡಿ ಅನುವಾದಿಸಿ ಕನ್ನಡದ ಓದುಗರ ಮುಂದೆ ಇಟ್ಟಿದ್ದಾರೆ. ವನ್ಯಾಸಕ್ತ ಓದುಗರಿಗೆ ಈ ಹೊತ್ತಿಗೆಯಲ್ಲಿ ಆಂಡರ್ಸನ್‌ನ ಕಾಡಿನ ಸಾಹಸಗಳ ಬಗ್ಗೆ, ವನ್ಯಜೀವಿಗಳ ಬಗ್ಗೆ, ಹಾಗೂ ಅವುಗಳನ್ನು ದೇಶ ಸ್ವತಂತ್ರವಾಗುವ ಮೊದಲೇ ವಿನಾಶದ ಅಂಚಿಗೆ ತಳ್ಳಿದ ಬೇಟೆಗಾರರ ಬಗ್ಗೆ ರೋಚಕ ವಿವರಗಳು ಸಾಕಷ್ಟು ದೊರೆಯುತ್ತವೆ. ಅಷ್ಟೇ ಮುಖ್ಯವಾಗಿ ದೇಶ ಸ್ವತಂತ್ರವಾಗುತ್ತಿದ್ದಂತೆ ಬದಲಾವಣೆಯ ಬಿರುಗಾಳಿಗೆ ಸಿಲುಕಿದ ಬೆಂಗಳೂರಿನ ಆಂಗ್ಲೋ ಇಂಡಿಯನ್ ಸಮಾಜ ಅತಂತ್ರವಾದ ನೈಜ ಚಿತ್ರಣವೂ ಈ ಕಥಾನಕದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಒಟ್ಟಾರೆಯಾಗಿ ಕನ್ನಡ ಓದುಗರಿಗೆ ಒಂದು ಹೊಸ ಪ್ರಪಂಚವನ್ನು ತೆರೆದಿಟ್ಟದೆ ಎಂಬುದು ನನ್ನ ಅಭಿಪ್ರಾಯ. -ಕೆ. ಉಲ್ಲಾಸ ಕಾರಂತ

About the Author

ಎಲ್.ಜಿ. ಮೀರಾ
(05 May 1971)

ಸ್ತ್ರೀವಾದಿ ಚಿಂತಕಿ, ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಕೊಡಗಿನವರು. ತಾಯಿ ಯು.ಕೆ ಚಿತ್ರಾವತಿ, ತಂದೆ ಎಲ್.ಜಿ.ಗುರುರಾಜ್ ಹುಟ್ಟಿದ್ದು 5-5-1971 ರಲ್ಲಿ. ಬಿ.ಎಸ್ಸಿ, ಎಂ.ಎ ಪದವಿ ಪಡೆದ ಇವರು ಪಿ.ಎಚ್ ಡಿಯನ್ನೂ ಪಡೆದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುವುದು ಇವರ ಹವ್ಯಾಸವಾಗಿದೆ.  ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ...

READ MORE

Related Books