“M ಡಾಕ್ಯುಮೆಂಟ್” ಭಾರತ ಏರುಗತಿ ಬೆಳವಣಿಗೆಯ ದಿನಗಳ ಕಥನವಾಗಿದ್ದು, ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ ಮೂಲಕ ಕೃತಿಯನ್ನು ರಾಜಾರಾಂ ತಲ್ಲೂರು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1980-2014 ತನಕದ ಭಾರತದ ಸಾಮಾಜಿಕ, ಆರ್ಥಿಕ ಚರಿತ್ರೆ ಇದು. ಇದನ್ನು “ಫರ್ಸ್ಟ್ ಹ್ಯಾಂಡ್ ಇನ್ಫಾರ್ಮೇಷನ್” ಸಹಿತ ಒಳಮನೆಯ ದೃಷ್ಟಿಕೋನದಿಂದ ಬರೆಯಬಹುದಾಗಿದ್ದವರು ಕೇವಲ ಇಬ್ಬರೇ ಇಬ್ಬರು. ಒಬ್ಬರು ಭಾರತದ ಪ್ರಧಾನಿ ಆಗಿದ್ದ ಡಾ| ಮನಮೋಹನ್ ಸಿಂಗ್; ಇನ್ನೊಬ್ಬರು ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ. ಮನಮೋಹನ್ ಸಿಂಗ್ ಈ ಚರಿತ್ರೆಯನ್ನು ದಾಖಲಿಸಿಲ್ಲ ಮತ್ತು ಹೆಚ್ಚಿನಂಶ ಇನ್ನು ದಾಖಲಿಸುವುದು ಅವರ ಪ್ರಾಯದ ಕಾರಣಕ್ಕೆ ಸಾಧ್ಯವಾಗದು. ಹಾಗಾಗಿ ಈ ಪುಸ್ತಕ ನಿಸ್ಸಂದೇಹವಾಗಿ ಭಾರತದ ಆ ಅವಧಿಯ ಬಹಳ ಅಥೆಂಟಿಕ್ ದಾಖಲೆ.
ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಮೊಂಟೆಕ್ ಅವರ ಬದುಕಿನ ಆರಂಭಿಕ ದಿನಗಳ ಆತ್ಮಕಥೆಯಂತಿದೆ. ಎರಡನೇ ಭಾಗ 1980-1991ರ ತನಕದ ನಡುವಿನ ಅವಧಿಯಲ್ಲಿ ಆರ್ಥಿಕ ಉದಾರೀಕರಣದ ಚಿಂತನೆಗಳಿಗೆ ಕಾರಣವಾದ ರಾಜಕೀಯ-ಆರ್ಥಿಕ-ಸಾಮಾಜಿಕ-ಜಾಗತಿಕ ಬಿಕ್ಕಟ್ಟುಗಳ ಸನ್ನಿವೇಶಗಳನ್ನು ವಿವರಿಸುತ್ತದೆ. ಮೂರನೇ ಭಾಗದಲ್ಲಿ, 1991ರ ಬಳಿಕದ ಆರ್ಥಿಕ ಸುಧಾರಣೆಗಳ ಆರಂಭದ ದಿನಗಳನ್ನು ವಿವರಿಸಲಾಗಿದೆ. ಭಾಗ 4 ರಲ್ಲಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಅವಧಿಯನ್ನು ಇಂಚಿಂಚಾಗಿ ಬಿಚ್ಚಿಡಲಾಗಿದೆ. ಇದಲ್ಲದೇ ಉಪಸಂಹಾರದಲ್ಲಿ ತೀರಾ ಇತ್ತೀಚೆಗಿನ ನೋಟು ರದ್ಧತಿ, GST ಮತ್ತಿತರ ಸಂಗತಿಗಳನ್ನೂ ಚರ್ಚಿಸಿದ್ದಾರೆ.
©2024 Book Brahma Private Limited.