‘ಬಾರಯ್ಯ ಮಮ ಬಂಧು’ ಅಮೆರಿಕಾದ ಮಹಿಳಾವಾದಿ ಲೇಖಕಿ ಬೆಲ್ ಹುಕ್ಸ್ ಅವರ The Will to Change: Men, Masculinity and Love ಎಂಬ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಚಿಂತಕಿ ಶ್ರೀಮತಿ ಎಚ್.ಎಸ್. ಅವರು ಕನ್ನಡಕ್ಕೆ ತಂದಿದ್ದಾರೆ. ಈ ಕೃತಿ ಗಂಡು-ಹೆಣ್ಣುಗಳಿಬ್ಬರು ಪ್ರೀತಿಯುತ ಬದುಕನ್ನು ಕಟ್ಟಿಕೊಳ್ಳಬೇಕಾದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸುತ್ತದೆ. ಪುಸ್ತಕದ ಕುರಿತು ಬರೆಯುತ್ತಾ ಶ್ರೀಮತಿ ಅವರು ‘ಬೆಲ್ ಹುಕ್ಸ್, ಮಹಿಳೆಯರು ಪ್ರೀತಿಯದಾರಿಯನ್ನು ಕಂಡುಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ತನ್ನ ಕಮ್ಯೂನಿಯನ್ (ಸಾಂಗತ್ಯ) ಎಂಬ ಕೃತಿಯಲ್ಲಿ ನೀಡುತ್ತಾಳೆ. ಹಾಗೆಯೇ ಪುರುಷರು ಪ್ರೀತಿಯನ್ನು ಕಂಡುಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ತನ್ನ ಈ'The Will To Change-Men, Masculinity, And Love wow ಕೃತಿಯಲ್ಲಿ ನೀಡಿದ್ದಾಳೆ. ಇದರಲ್ಲಿ ಪುರುಷರು ತಮ್ಮ ಬೇಟೆಗಾರ ಪ್ರವೃತ್ತಿಯನ್ನು ಬಿಟ್ಟುಕೊಟ್ಟರೆ ಮಾತ್ರವೇ ಪ್ರೀತಿಯ ದಾರಿಯನ್ನು ಕಾಣಲು ಸಾಧ್ಯ ಎಂಬ ಸಂದೇಶವನ್ನು ಕೊಡುತ್ತಾಳೆ. ಪುರುಷರು ತಮಗೆ ಪಿತೃಪ್ರಧಾನತೆಯು ಕಲಿಸಿರುವ ಪುರುಷತ್ವವನ್ನು ನಿರಾಕರಿಸಿ, ತಮ್ಮ ಪುರುಷತ್ವದ ನಿಜವಾದ ಸ್ವರೂಪವನ್ನು ಗ್ರಹಿಸಬೇಕು ಎಂದು ಆಗ್ರಹಿಸುವ ಬೆಲ್ ಹುಕ್ಸ್, ಇದರಲ್ಲಿ ಅವರಿಗೆ ನೆರವಾಗುವ ಒಂದು ಸ್ತ್ರೀವಾದೀ ನೀಲನಕ್ಷೆಯನ್ನೂ ಒದಗಿಸುತ್ತಾಳೆ. ಎಂದಿದ್ದಾರೆ.
©2024 Book Brahma Private Limited.