ಲೇಖಕ ಆನಂದ ವಿ. ಪಾಟೀಲ ಅವರು ಅನುವಾದಿಸಿದ ಕೃತಿ ʻಅಂಡಮಾನಿನ ಒಂದು ಪ್ರಾಚೀನ ಕತೆʼ. ಮೂಲ ಕೃತಿಯನ್ನು ಭಾಷಾಶಾಸ್ತ್ರದ ಪ್ರಾಧ್ಯಾಪಕಿ ಹಾಗೂ ಲೇಖಕಿ ಅನ್ವಿತಾ ಅಬ್ಬಿ ಅವರು ರಚಿಸಿದ್ದಾರೆ. ಈ ಪುಸ್ತಕವು ಭವ್ಯ ಪರಂಪರೆಯ ಅಂಡಮಾನಿಗಳ ಮೊದಲ ಜನಪದ ಕತೆಯನ್ನು ಹೇಳುತ್ತದೆ. ಅಂಡಮಾನಿಗಳು 70,000 ವರ್ಷಗಳ ಹಿಂದೆಯೇ ಆಫ್ರಿಕಾದಿಂದ ವಲಸೆ ಬಂದಿರುವವರ ಸಂತತಿ ಎಂದು ನಂಬಲಾಗಿದೆ. ಅಂಡಮಾನಿನ ಬುಡಕಟ್ಟುಗಳ ಸ್ಥಳೀಯ ಭಾಷೆಯಲ್ಲಿ ತುಂಬಿಕೊಂಡಿರುವ ಸಾಂಸ್ಕೃತಿಕ ಸಂಪತ್ತು, ಹಿರಿಯರು ಗತಿಸಿದಂತೆ ಮರೆಯಾಗಿ ಹೋಗುವ ಅಪಾಯವಿದೆ. ಇಲ್ಲಿ ಅಂತಹ ಜನಾಂಗದ ಪುರಾತನ ಕತೆಯನ್ನು ಹೇಳಲಾಗಿದೆ.
ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...
READ MORE