ಪಾ.ವೆಂ. ಆಚಾರ್ಯರ ಕೃತಿ-ಸುಭಾಷಿತ ಚಮತ್ಕಾರ. ಸಂಸ್ಕೃತದಲ್ಲಿಯ ಆಯ್ದ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೃತಿ ಇದು. ಸರಸ್ವತೀ ಮನೋಹರೀ, ಧನ ಮಹಿಮೆ, ಮನೋಬಲಂ ಬಲಂ, ಈ ನಂಟು ಕಗ್ಗಂಟು, ಸಜ್ಜನ-ದುರ್ಜನ, ಆಳುವವರ ಸ್ವರೂಪ, ಸ್ತುತಿ ಚಮತ್ಕಾರ, ವೈರಾಗ್ಯ ಭಾಗ್ಯ ಹೀಗೆ ವೈವಿಧ್ಯಮಯವಾದ ಒಟ್ಟು 13 ವಿಷಯಗಳಡಿ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಕನ್ನಡ ಹಾಗೂ ಸಂಸ್ಕೃತದಲ್ಲಿ ಸಾಂದರ್ಭಿಕ ಟಿಪ್ಪಣಿಗಳನ್ನು ನೀಡಿದ್ದು, ಓದುಗರಿಗೆ ಸುಗಮವಾಗಿಸಲಾಗಿದೆ.
ಇಲ್ಲಿಯ ಬಹುತೇಕ ಸುಭಾಷಿತಗಳು ಕಸ್ತೂರಿ, ಪರಂಜ್ಯೋತಿ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾದವು. ಸುಭಾಷಿತಗಳ ಪೈಕಿ ಲೋಕೋಕ್ತಿ, ಚಾಟೂಕ್ತಿ, ಸರಸೋಕ್ತಿಗಳ ಸರಣಿಯು ಲಲಿತ ಗಾಂಭೀರ್ಯತೆಯಿಂದ ಸಾಗಿದೆ ಎಂದು ಕೃತಿಗೆ ಮುನ್ನುಡಿ ಬರೆದ ಡಾ. ಕೆ. ಕೃಷ್ಣಮೂರ್ತಿ ಪ್ರಶಂಸಿಸಿದ್ದಾರೆ.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE