ವಿನಯಚೈತನ್ಯ ಅವರ ಕೃತಿ ನಾರಾಯಣ ಗುರು ಸಂಪೂರ್ಣ ಕೃತಿಗಳು. ಸಾಮಾನ್ಯವಾಗಿ ನಾರಾಯಣ ಗುರುವನ್ನು ಸಮಾಜ ಸುದಾರಕರೆಂದು ಬಾವಿಸಲಾಗಿದೆ.ಮಹಾತ್ಮಾ ಗಾಂದಿಯವರ ಮೇಲಿನ ಅವರ ಪ್ರಬಾವವನ್ನೂ ಗುರುತಿಸಲಾಗಿದೆ.ಆದರೆ ಇದೊಂದು ಅಪೂರ್ವ ಚಿತ್ರಣ.ಎಲ್ಲಕ್ಕಿಂತ ಹೆಚ್ಚಾಗಿ ನಾರಾಯಣ ಗುರುವು ಅದ್ವೈತದ ಪ್ರತಿಪಾದಕರಾಗಿದ್ದರು.ಆದ್ದರಿಂದಲೇ ಅವರಿಗೆ ಜನರನ್ನು ವಿಬಜಿಸುವ ಮಾನವ ವಿರ್ಮಿತವಾದ ತಡೆಗೋಡೆಗಳ ಬಗ್ಗೆ ತೀವ್ರ ಅಸಹನೆ ಇತ್ತು.ಇದರಿಂದ ಸಹಜವಾಗಿಯೇ ಅವರು ತಮ್ಮ ಸುತ್ತಲಿನ ಸಮಾಜದಲ್ಲಿ ರೂಡಿಗತವಾಗಿ ನೆಲೆಸಿದ್ದ ಅಸಮಾನತೆಯನ್ನು ನಿವಾತಿಸಲು ಪ್ರಯತ್ನಿಸಿದರು.ಬೀಜ ಬಿತ್ತುವ ಮೊದಲು ರೈತನೊಬ್ಬ ಹೊಲವನ್ನು ಸಿದ್ದಪಡಿಸುವ ರೀತಿಯೆಂತೇ ಇದು.ಮಾನವರೆಲ್ಲರದೂ ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೈವವೆಂಬುದೇ ಅವರ ಉಪದೇಶದ ಸಾರವಾಗಿತ್ತು.ಅವರ ಮಟ್ಟಿಗೆ ಇದು ಕೂಗಿ ಹೇಳುವ ಘೋಷಣೆಯಲ್ಲ,ವಾಸ್ತವದ ನಿಜ ದರ್ಶನ.ಸಕಲವೂ ಒಂದೇ ಮೂಲದಿಂದ ಹೊರಹೊಮ್ಮಿದ್ದು,ಅತ್ಮಸಾಹೋದರ್ಯದ ಸತ್ಯವನ್ನು ಸಾರುತ್ತದೆ ಎಂದು ನುಡಿದ ಕರುಣಾ ಸಾಗರ ನಾರಾಯಣ ಗುರುವು ಯಥಾಸ್ಥಿತಿ ವಾದವನ್ನು ತಿರಸ್ಕರಿಸಿದವರು.ಮಾನವಜೀವನವನ್ನು ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಎಂದು ಕೃತಕವಾಗಿ ವಿಭಜಿಸಲು ನಿರಾಕರಿಸಿದ ನಾರಾಯಣ ಗುರುಗಳು ಜೀವನ ಅಖಂಡ ಮತ್ತು ಅದ್ವಯ ಎಂದು ನಂಬಿದ್ದರು. ಈ ಮೂಲ ತತ್ವ ಅವರ ಎಲ್ಲ ಬೋದನೆ,ಬರವಣಿಗೆಯಲ್ಲಿ ಹಾಸುಹೊಕ್ಕಾಗಿದೆ.ಈ ತರುವಾದ ಅದ್ವೈತ ಚಿಂತನೆ ನಮ್ಮನ್ನು ವಿಶ್ವಪ್ರಜೆಗಳನ್ನಾಗಿ ಪರಿಬಾವಿಸಿ,ನಮ್ಮೆಲ್ಲರ ಅಸೀಮ ಆದ್ಯಾತ್ಮಿಕ ಜವಾಬ್ದಾರಿಯ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ.
©2024 Book Brahma Private Limited.