ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಮಾಡಿದ ಕಾವ್ಯ ಕೃತಿ ಕಾಳಿದಾಸನ ʼರಘುವಂಶ ಚರಿತಂʼ. ಅನುವಾದವನ್ನು ಲೇಖಕ ದೊಡ್ಡಬೆಲೆ ನಾರಾಯಣ ಶಾಸ್ತ್ರಿ ಅವರು ಮಾಡಿದ್ದಾರೆ. ಪ್ರೊ. ಜಿ. ಅಶ್ವತ್ಥಾರಾಯಣ ಅವರು ಸಂಪಾದಕರು. ಈ ಕೃತಿಯು ಕಾಳಿದಾಸನ ರಘುವಂಶ ಕಾವ್ಯದ ಗದ್ಯಾನುವಾದವಾಗಿದೆ. ಇಕ್ಷ್ವಾಕು ವಂಶದ ದಿಲೀಪ ರಾಜ ಮತ್ತು ಸುದಕ್ಷಿಣಾಗೆ ಜನಿಸಿದ ಮಗು ರಘು . ರಘು ಪದದ ಅರ್ಥ ಎಂದರೆ ಬಹಳ ವೇಗವಾಗಿ ಸಾಗುವವ ಎಂದು . ರಘುವು ವಹಳ ವೇಗವಾಗಿ ಯುದ್ಧರಥವನ್ನು ನಡೆಸುವ ಛಾತಿ ಉಳ್ಳವನು. ರಘುವಿನ ಹೆಗ್ಗಳಿಕೆಯಿಂದ ಇಕ್ಷ್ವಾಕು ವಂಶವನ್ನು ರಘುವಂಶವೆಂದೇ ಕರೆಯಲಾಗುತ್ತದೆ. ವಿಷ್ಣು ಪುರಾಣ, ವಾಯು ಪುರಾಣ, ಲಿಂಗ ಪುರಾಣ ಇವು ಎಲ್ಲದರಲ್ಲೂ ರಘುವಿನ ಬಗ್ಗೆ ಉಲ್ಲೇಖ ಇವೆ.
©2024 Book Brahma Private Limited.