"ಹಾರುವುದು ಹೇಗೆಂದು ಕಲಿತುಕೊಳ್ಳುವಿಕೆ" ಪುಸ್ತಕದಲ್ಲಿ ಶ್ರೀಯುತರು ನೀಡಿರುವ ಸುಮಾರು ಎರಡು ಸಾವಿರ ಉಪನ್ಯಾಸಗಳ ಪೈಕಿ ಕೆಲವನ್ನು ಸಂಗ್ರಹಿಸಲಾಗಿದೆ. ಈ ಉಪನ್ಯಾಸಗಳನ್ನು ಶಾಲೆಗಳು ಹಾಗೂ ಇನ್ನಿತರ ಸಂಸ್ಥೆಗಳ ಉಪಾಧ್ಯಾಯರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಲಾಗಿತ್ತು. ಪ್ರತಿಯೊಂದು ಉಪನ್ಯಾಸದಲ್ಲೂ ಅವರು ವ್ಯಕ್ತಿಯೊಬ್ಬ ತನ್ನ ಬದುಕಿಗಾಗಿ ಅತ್ಯುತ್ತಮ ರೀತಿಯಲ್ಲಿ ಸಿದ್ಧಗೊಳ್ಳುವುದು ಹೇಗೆ, ಸವಾಲುಗಳನ್ನು ಗುರುತಿಸಿ ಅವುಗಳಿಂದ ಪಾರಾಗುವುದು ಹೇಗೆ, ತನ್ನಲ್ಲಿನ ಅತ್ಯುತ್ತಮ ಅಂಶಗಳನ್ನು ಹೊರಹೊಮ್ಮಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕನಸುಗಳ ಪ್ರಾಮುಖ್ಯತೆಯನ್ನು ಮತ್ತು ಅವುಗಳು ಸಾಕಾರಗೊಳ್ಳಲು ಬೇಕಾದ ತೀವ್ರತೆಯ ಶ್ರಮವನ್ನು ಸಾಧಿಸುವ ಬಗೆಯನ್ನು ತಮ್ಮ ಸ್ವಂತ ಬದುಕು ಅವರ ಉಪಾಧ್ಯಾಯರು ಹಾಗೂ ಗುರುಗಳ ಬದುಕುಗಳ ಮೂಲಕ, ವಿಶ್ವದ ಕೆಲವು ಶೇಷ ಪುರುಷರು ಮತ್ತು ಮಹಿಳೆಯರ ಕಥೆಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನವರೆಗಿನ ಬೆಳವಣಿಗೆಗಳ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ. ತುಂಬಿರುವ ಆತ್ಮೀಯತೆ, ಸ್ಪೂರ್ತಿ ಹಾಗೂ ಧನಾತ್ಮಕ ಮನೋಭಾವದಿಂದ “ಹಾರುವುದು ಹೇಗೆಂದು ಕಲಿತುಕೊಳ್ಳುವಿಕೆ"ಯು ಕಿರಿಯರು ಅಥವಾ ಹಿರಿಯರೆನ್ನದೆ ಎಲ್ಲಾ ಭಾರತೀಯರು ಅಗತ್ಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
©2024 Book Brahma Private Limited.