ವಾಕ್ಯಪದೀಯ- ಪ್ರಾಚೀನ ಭಾರತದ ಮಹಾನ್ ಭಾಷಾತತ್ವಜ್ಞಾನಿಯಾದ ಭರ್ತೃಹರಿಯ ವಾಕ್ಯಾಪದೀಯಮ್ ಗ್ರಂಥದ ಕನ್ನಡ ಅನುವಾದಿತ ಕೃತಿ. ಸಂಸ್ಕೃತ ಮೂಲ ಮತ್ತು ಕನ್ನಡಾನುವಾದ, ವಿವರಣೆಗಳು ಮೂರೂ ಇವೆ. ಈ ಕೃತಿಯನ್ನು ವಿದ್ವಾನ್ ಎನ್.ರಂಗನಾಥಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಹಳೆ ತಲೆಮಾರಿನ ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ ಎನ್. ರಂಗನಾಥ ಶರ್ಮರು ಸಂಸ್ಕೃತದ ಅನೇಕ ಮೇರು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರು ತಮ್ಮ ಸಂಪಾದಕೀಯ ಲೇಖನದಲ್ಲಿ ಭರ್ತೃಹರಿ, ಬೌದ್ಧಮೀಮಾಂಸೆ ಮತ್ತು ಸಮಕಾಲೀನ ಪಾಶ್ಚ್ಯಾತ್ಯ ಚಿಂತನೆ ಬೆರೆಯುವ, ಬೇರೆಯಾಗುವ ನೆಲೆಗಳನ್ನು ಚರ್ಚಿಸಿದ್ದಾರೆ. ಇದನ್ನು ಕನ್ನಡದ ವಿದ್ವತ್ ಲೋಕವನ್ನು ವಿಸ್ತರಿಸುವ ಕೃತಿ ಎಂದೇ ಕರೆಯಲಾಗುತ್ತದೆ.
©2024 Book Brahma Private Limited.