ವಿನೋಬಾ ಅವರ ಹಿಂದಿ ‘ಭಕ್ತಿ ದರ್ಶನ’ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮಸ್ವಾಮಿಗಳು ಕನ್ನಡೀಕರಿಸಿದ್ದಾರೆ. ಭಕ್ತಿ, ಶ್ರದ್ಧೆ, ಮತ್ತು ವಿಶ್ವಾಸಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಭಕ್ತಿಯ ನೈಜ ಚಿತ್ರಣವನ್ನು ನೀಡಿ ಜನರನ್ನು ಭಕ್ತಿಯೆಡೆಗೆ ಆಕರ್ಷಿಸುವುದು ಅತ್ಯಂತ ಅವಶ್ಯಕವಾಗಿದೆ. ವಿನೋಬಾಜಿ ಅವರು ಹಾರ್ದಿಕತೆಯನ್ನು ಭಕ್ತಿಯ ಪ್ರಾಣವೆಂದು ಹೇಳಿದರು. ಅತ್ಯಂತ ಆತ್ಮೀಯತೆಯ ಕಾರಣದಿಂದಾಗಿ ಈಶ್ವರನೊಡನೆ ಅವರ ಅಂತರಂಗದ ಸಂಬಂಧವು ಜೋಡಿಸಲ್ಪಟ್ಟಿತ್ತು. ಅವರ ಲೇಖನ-ಪ್ರವಚನಗಳಲ್ಲಿ ಆ ಸಂಬಂಧವು ಸಂದರ್ಭಾನುಸಾರ ಪ್ರಕಟವಾಗುತ್ತಲೂ ಇರುತ್ತದೆ. ವೈಜ್ಞಾನಿಕ ವಿಶ್ಲೇಷಣೆ ಮತ್ತು ಹೃದಯದ ತಳಮಳ ಈ ಉಭಯ ಅಂಗಗಳಿಂದ ಪರಿಪುಷ್ಟವಾದ ಅವರ ಭಕ್ತಿಮಾರ್ಗದ ಪೂರ್ಣವಿವೇಚನೆಯು ಅವರ ವಾಜ್ಞ್ಮಯದಲ್ಲಿ ಪ್ರತಿಧ್ವನಿತವಾಗುತ್ತದೆ. ಭಕ್ತಿಯ ನಿಜವಾದ ಗ್ರಹಿಸುವ ದೃಷ್ಟಿ ಮತ್ತು ಅದರ ಜೊತೆ-ಜೊತೆಗೆ ಪ್ರತ್ಯಕ್ಷವಾಗಿ ಈಶ್ವರನೊಂದಿಗೆ ಕೂಡಿಕೊಳ್ಳುವ ಕೆಲವು ವ್ಯಾವಹಾರಿಕ ಸೂಚನೆಗಳೂ ಕೂಡಾ ಇಲ್ಲಿ ದೊರೆಯುತ್ತವೆ.
©2024 Book Brahma Private Limited.