ಬರ ಅಂದ್ರೆ ಎಲ್ಲರಿಗೂ ಇಷ್ಟ’ದಲ್ಲಿ ಸುಮಾರು 7೦ ಲೇಖನಗಳಿವೆ ಅವುಗಳನ್ನು 1೦ ಅಧ್ಯಾಯಗಳಾಗಿ ವಿಂಗಡಿಸಲಾಗಿದೆ.
'ಭಾರತೀಯ ಪತ್ರಿಕೋದ್ಯಮದ ಕೆಟ್ಟ ಹುಡುಗ' ಎಂಬ 'ಪ್ರಶಂಸೆ'ಗೆ ಗುರಿಯಾದವರು ಪಿ ಸಾಯಿನಾಥ್, ಈ ಕೆಟ್ಟ ಹುಡುಗ ಕಳೆದ 18 ವರ್ಷಗಳಿಂದ ದೇಶದ ಕಡು ಬಡ ಜಿಲ್ಲೆಗಳನ್ನು ಸುತ್ತುತ್ತಿದ್ದಾರೆ ಯಾವುದೇ ಭೂಪಟದಲ್ಲಿ ಕಾಣಿಸಿಕೊಳ್ಳದೇ ಹೋಗುವಂತಹ ಕುಗ್ರಾಮಗಳಲ್ಲಿ ವರ್ಷದ 300 ದಿನ ಕಳೆಯುವ ಸಾಯಿನಾಥ್ ಆ ಹಳ್ಳಿಗಳಿಗೆ, ಹಳ್ಳಿಯ ಜನತೆಗೆ ಘನತೆ ತಂದವರು. ಸಾಯಿನಾಥ್ ಅವರ ಸುತ್ತಾಟ ದೇಶದ ನೀತಿ ರೂಪಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಹಲವು ಪ್ರಧಾನಿಗಳು ಇವರು ಪ್ರಸ್ತಾಪಿಸಿದ ಹಳ್ಳಿಗಳತ್ತ ಧಾವಿಸುವಂತೆ ಮಾಡುತ್ತದೆ. ಅವರ ಈ ಕೃತಿ Everybody loves a good drought ದೇಶದ ಪ್ರಜ್ಞೆಯನ್ನು ಕಲಕಿದೆ. ಕನ್ನಡ ಪತ್ರಿಕೋದ್ಯಮದ ಮುಖ್ಯ ಹೆಸರಾದ ಜಿ ಎನ್ ಮೋಹನ್ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ
©2024 Book Brahma Private Limited.